ಮಾಧುರಿಗಾಗಿ ಮೌನ ಪ್ರತಿಭಟನೆ

7_BGV_Kagavad4
Published on

ಕಾಗವಾಡ: ನಾಂದನಿ ಜೈನ ಮಠದ ಮಾಧುರಿ (ಮಹಾದೇವಿ) ಆನೆಯನ್ನು ಗುಜರಾತನ ವನತಾರ ಅಭಯಾರಣ್ಯದಿಂದ ಮರಳಿ ನೀಡಬೇಕು ಎಂದು ಜೈನ, ಹಿಂದು, ಮುಸ್ಲಿಂ ಸಮುದಾಯದವರು ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಗುರುವಾರ ಮೌನ ಪ್ರತಿಭಟನೆ ನಡೆಸಿದರು.

ಮುಸ್ಲಿಂ ಸಮುದಾಯದ ಮುಖಂಡ ಶಬ್ಬೀರ್​ ಮನಿಯರ, ಬಾಬಾಸಾಹೇಬ್​ ಮೇಸಿ ಮಾತನಾಡಿ, ನಾಂದನಿ ಜೈನ ಮಠ ಪುರಾತನದ್ದಾಗಿದೆ. ಹಲವಾರು ವರ್ಷಗಳಿಂದ ಆನೆ ಇಲ್ಲಿದೆ. ಎಲ್ಲ ಸಮುದಾಯದವರು ಮಾಧುರಿ ಮೇಲೆ ಪ್ರೀತಿ, ಬಾಂಧವ್ಯ ಬೆಳೆಸಿಕೊಂಡಿದ್ದೇವೆ. ವನತಾರದಿಂದ ಮರಳಿ ನಾಂದನಿ ಮಠಕ್ಕೆ ಆನೆಯನ್ನು ಕಳುಹಿಸಬೇಕು ಎಂದು ಒತ್ತಾಯಿಸಿದರು.

ಶಾಂತಿಸಾಗರ ಜೈನ ಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ ಮಾತನಾಡಿ, ನಾಂದನಿ ಜೈನ ಮಠದ ಆನೆಯನ್ನು ಮರಳಿ ತರುವ ಭರವಸೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ ಎಂದರು.

ಪಟ್ಟಣದ ಶಾಂತಿಸಾಗರ ಜೈನ ಆಶ್ರಮದಿಂದ ಪ್ರಾರಂಭಗೊಂಡ ಮೌನ ಮೆರವಣಿಗೆ ಪ್ರಮುಖ ರಸ್ತೆ ಮೂಲಕ ಸಾಗಿ ಶ್ರೀ ಬಸವಣ್ಣ ದೇವಸ್ಥಾನದ ಎದುರು ಸಭೆ ಸೇರಿದರು. ಉಪ ತಹಸೀಲ್ದಾರ್​ ಅಣ್ಣಾಸಾಹೇಬ ಕೋರೆ ಹಾಗೂ ಪಿಎಸ್​ಐ ರಾವೇಂದ್ರ ಖೋತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ವಕೀಲ ಪ್ರವಿಣ ಕೆಂಪವಾಡೆ, ಬಿ.ಎಂ. ಗಣಿ, ನಿವೃತ್ತ ಮುಖ್ಯ ಶಿಕ್ಷಕ ಎಂ.ಎಂ.ಗಣಿ, ಪಪಂ ಅಧ್ಯ ಉತ್ಕರ್ಷ ಪಾಟೀಲ, ಅಜಿತ್​ ನರಸಗೌಡರ, ಬಾಬಾಸಾಹೇಬ ಸೌಂದತ್ತಿ, ಸುನೀಲ ಪಾಟೀಲ, ಅಶ್ವತ್ಥ ಪಾಟೀಲ, ಕಿರಣ ಯಂದಗೌಡರ, ನಜೀರ್​ ಮುಲ್ಲಾ, ತಾನಾಜಿ ಗಾವಡೆ, ಸಂಭಾ ನಿಕಂ, ಭರತ ನಾಂದ್ರೆ, ಅಜಿತ್​ ರಾಜನಿ, ಪಲ್ಲವಿ ನರಸಗೌಡರ, ಪಂಕಜ ಪಾಯಗೌಡರ, ಉಜ್ವಲಾ ನರಸಗೌಡರ, ಶೇಡಬಾಳ ಸ್ಟೇಷನ್​ ಪದ್ಮಾವತಿ ಮಹಿಳಾ ಮಂಡಳ, ಕಲ್ಲಾಳದ ಮಹಿಳಾ ಮಂಡಳದ ಸದಸ್ಯೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net