ಮಾದೇಗೌಡರ ಹೋರಾಟದ ನೆನಪು ಅಜರಾಮರ

16KMD-1
Published on

ಕೆ.ಎಂ.ದೊಡ್ಡಿ: ಸೂರ್ಯ-ಚಂದ್ರ ಇರುವವರೆಗೂ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರ ಹೋರಾಟದ ನೆನಪುಗಳು ಇರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದರು.


ಭಾರತೀ ಉತ್ಸವದ ಅಂಗವಾಗಿ ಭಾರತೀ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂತರ ಕಾಲೇಜುಗಳ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಮಾದೇಗೌಡ ಅವರು ವಿದ್ಯಾರ್ಥಿ ದಿಸೆಯಲ್ಲೇ ಹೋರಾಟದ ಕಿಚ್ಚನ್ನು ರಕ್ತದಲ್ಲಿ ರೂಢಿಸಿಕೊಂಡ ಮಹಾನ್ ವ್ಯಕ್ತಿ. ಜಿಲ್ಲೆಯ ಜ್ವಲಂತ ಸಮಸ್ಯೆಗಳು ಬಂದಾಗ ಇಳಿವಯಸ್ಸಿನಲ್ಲೂ ಟೊಂಕ ಕಟ್ಟಿ ನಿಲ್ಲುತ್ತಿದ್ದರು. ಆಡಳಿತದಲ್ಲಿ ಯಾವುದೇ ಸರ್ಕಾರವಿರಲಿ ಚಾಟಿ ಬೀಸುತ್ತ ರೈತಪರ ಧ್ವನಿಯಾಗಿದ್ದರು. ಅವರ ಆಶಯಗಳನ್ನು ಅವರ ಪುತ್ರ ಮಧು ಜಿ.ಮಾದೇಗೌಡ ಈಡೇರಿಸಲಿ ಎಂದರು.


40 ವರ್ಷಗಳಲ್ಲಿ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿರಲಿಲ್ಲ ಇಂದು ನಿಮ್ಮ ಸೇವೆ ಮಾಡಲು ಭಾರತೀ ಕಾಲೇಜಿನ ಸಿಬ್ಬಂದಿ ಮತ್ತು ಅಭಿಮಾನಿಗಳಿಂದ ಮಧು ಮಾದೇಗೌಡ ಅವರು ಗೆದ್ದು ಬಂದಿದ್ದಾರೆ. ಅವರು ಸದಾ ನಿಮ್ಮ ಜತೆ ಶಿಕ್ಷಕರ ಸಮಸ್ಯೆಗೆ ಸದನದಲ್ಲಿ ಧ್ವನಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.


ಗ್ರಾ.ಪಂ ಅಧ್ಯಕ್ಷೆ ಕೌಸಲ್ಯಾ ಅರ್ಕೇಶ್, ಬಿಇಟಿ ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಜಿ.ಡಿ.ಹಳ್ಳಿ ಸಿದ್ದೇಗೌಡ, ಸದಸ್ಯರಾದ ಕಾರ್ಕಹಳ್ಳಿ ಬಸವೇಗೌಡ, ಎಸ್.ಜಯರಾಮು, ಮುದ್ದಯ್ಯ, ಪ್ರಾಂಶುಪಾಲರಾದ ಡಾ.ಟಿ.ನಾಗೇಂದ್ರ, ಪ್ರೊ.ಎಸ್.ನಾಗರಾಜು, ಡಾ.ತಮಿಜ್‌ಮಣಿ, ಜಿ.ಕೃಷ್ಣ, ಸಿ.ವಿ.ಮಲ್ಲಿಕಾರ್ಜುನ, ನಾಗಮಾದಯ್ಯ, ಹಿರಿಯ ಗ್ರಂಥಪಾಲಕ ಎ.ಎಸ್.ಸಂಜೀವ್ ಸಿದ್ದರಾಮೇಗೌಡ, ಕಳ್ಳಿಮೆಳ್ಳೆದೊಡ್ಡಿ ಪ್ರಸನ್ನ, ಪುಟ್ಟಸ್ವಾಮಿ, ನಿಖಿಲ್, ಮಿಥುನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net