ಮಾದಿಗರಿಗೆ ಕೈ ಜಿಲ್ಲಾಧ್ಯಕ್ಷ ಸ್ಥಾನ ನೀಡಿ

congress
Published on

ಕಲಬುರಗಿ: ಸಾಮಾಜಿಕ ನ್ಯಾಯ ಪಾಲಿಸಲು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನವನ್ನು ಮಾದಿಗ ಸಮುದಾಯದವರಿಗೆ ನೀಡಬೇಕು ಎಂದು ಕೆಪಿಸಿಸಿ ಪಜಾ, ಪಪಂ ಮಾಜಿ ಜಂಟಿ ಸಂಚಾಲಕ, ಹಿರಿಯ ಮುಖಂಡ ಡಾ.ಜಿ.ಗೋಪಾಲರಾವ ಮನವಿ ಮಾಡಿದರು.
ಕಾಂಗ್ರೆಸ್‌ನಿಂದ ಜಿಲ್ಲೆಯ ಮೂರು ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ದಲಿತ ಎಡಗೈ, ದಲಿತ ಬಲಗೈ ಮತ್ತು ಬಂಜಾರ ಸಮುದಾಯಕ್ಕೆ ತಲಾ ಒಂದು ಟಿಕೆಟ್ ನೀಡಲಾಗುತ್ತಿತ್ತು. ಪ್ರಸ್ತುತ ಎರಡು ಬಂಜಾರಕ್ಕೆ ನೀಡಿ, ಮಾದಿಗ ಸಮಾಜದವರನ್ನು ಕಡೆಗಣಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಿಧಾಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ೫೦ ಸಾವಿರಕ್ಕೂ ಹೆಚ್ಚಿನ ಮತ ಪಡೆದ ಜಿ.ಆರ್.ವಿಜಯಕುಮಾರಗೆ ಟಿಕೆಟ್ ನೀಡದೆ ಅನ್ಯಾಯ ಮಾಡಲಾಯಿತು. ನಂತರವೂ ಸ್ಥಾನ ನೀಡಲಿಲ್ಲ. ಈಗಲಾದರೂ ಅವಕಾಶ ನೀಡಬೇಕು ಎಂದರು.
ಸಮುದಾಯದ ಮಂಜುನಾಥ ನಾಲವಾರಕಾರ್ ಮಾತನಾಡಿ, ಹಲವು ವರ್ಷದಿಂದ ಸಮುದಾಯ ಒಮ್ಮತವಾಗಿ ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ರಾಧಾಕೃಷ್ಣ ಅವರನ್ನು ಬೆಂಬಲಿಸಲಾಗಿದೆ. ಸಾಮಾಜಿಕ ನ್ಯಾಯ ನೀಡಲು ಜಿಲ್ಲಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಮುಖಂಡರು ಮಾದಿಗ ಸಮಾಜಕ್ಕೆ ನೀಡಬೇಕು ಎಂದರು.
ಪ್ರಮುಖರಾದ ಆದ್ಯಪ್ಪ ಪಾಟೀಲï ಕೋಳಕೂರ, ಜಯರಾಜ ಕಿಣಗಿ, ಸಿದ್ಧಾರೂಢ ಧುಮ್ಮನಸೂರ, ಆನಂದ ತೆಗನೂರು, ನಾಗರಾಜ ಧುಮ್ಮನಸೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net