ಮಾದಿಗರ ನಡೆ ಬಿಜೆಪಿ ಕಡೆಗೆ

BJP ROUND
Published on

ಕಲಬುರಗಿ: ಮೇ ೩ ರಂದು ಸೇಡಂ ಪಟ್ಟಣದಲ್ಲಿ ಮಾದಿಗ ಸಮಾಜದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಮಾದಿಗ ಕುಲಸ್ಥರು ಪಾಲ್ಗೊಳಬೇಕು ಎಂದು ಮಾದಿಗ ದಂಡೋರಾ ಸಮಿತಿ ಯುವ ಘಟಕದ ರಾಜ್ಯಾಧ್ಯಕ್ಷ ಗುರುರಾಜ ಭಂಡಾರಿ ತಿಳಿಸಿದರು.
ಮಾದಿಗ ದಂಡೋರಾ ಸಮಿತಿ ನೇತಾರ ಮಂದಕೃಷ್ಣ ಮಾದಿಗ, ಪ್ರಮುಖರಾದ ಬಿ.ನರಸಪ್ಪ ದಂಡೋರಾ, ಫರ್ನಾಂಡಿಸ್ ಇಬ್ಬಳಗಾಂವ ಸೇರಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನ್ಯಾ.ಎ.ಜೆ.ಸದಾಶಿವ ಆಯೋಗದ ಒಳಮೀಸಲಾತಿ ವರದಿ ಜಾರಿಗೆ ಬಗ್ಗೆ ಧ್ವನಿ ಎತ್ತದ ಖರ್ಗೆದ್ವಯರಿಂದ ಸಾಮಾಜಿಕ ನ್ಯಾಯ ಊಹಿಸಲು ಸಾಧ್ಯವೇ? ನಮ್ಮ ಸಮಾಜಕ್ಕೆ ಕಾಂಗ್ರೆಸ್ ಕೊಡುಗೆ ಏನಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್‌ಗೆ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದರು. ಸಂದೇಶ ಕೋಬಾಳಕರ್, ಶಂಭುಲಿAಗ ನಾಟೀಕಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net