ಮಾದಿಗ ಸಮುದಾಯದ ಏಳಿಗೆಗೆ ಶ್ರಮಿಸಿದ್ದ ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಶ್ರೀಗಳಿಗೆ ಶ್ರದ್ಧಾಂಜಲಿ

06 Nela Ph 01 Shradanjali
Published on

ನೆಲಮಂಗಲ ಮಾದಿಗ ಸಮುದಾಯದ ಏಳಿಗೆಗೆ ಶ್ರಮಿಸಿದ್ದ ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿ ಅವರ ಅಗಲಿಕೆ ಸಮುದಾಯಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಎಂದು ಮಾದಿಗ ಮಹಾಸಭಾ ತಾಲೂಕು ಅಧ್ಯಕ್ಷ ಕನಕರಾಜು ತಿಳಿಸಿದರು.

ನಗರದ ಜಯನಗರದ ಶ್ರೀ ಆದಿಜಾಂಬವ ಮಠದಲ್ಲಿ ಮಾದಿಗ ಮಹಾಸಭಾ ಶನಿವಾರ ಆಯೋಜಿಸಿದ್ದ ಇತ್ತೀಚೆಗೆ ಲಿಂಗೈಕ್ಯರಾದ ಕೋಡಿಹಳ್ಳಿ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಮಠಾಧೀಶ ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಮಾರು ಮೂರ‌್ನಾಲ್ಕು ದಶಕಗಳಿಂದ ಮಾದಿಗ ಸಮುದಾಯದ ಧ್ವನಿಯಾಗಿದ್ದ ಶ್ರೀಗಳು ಹಲವಾರು ಹೋರಾಟ ಮಾಡಿ, ಸಾಕಷ್ಟು ಮಂದಿಗೆ ನೇರವಾಗಿದ್ದಾರೆ ಎಂದರು.

ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಗ್ರಾಪಂ ಸದಸ್ಯ ನಾಗರಾಜು, ಮಾದಿಗ ಮಹಾಸಭಾ ತಾಲೂಕು ಉಪಾಧ್ಯಕ್ಷ ರಾಮಾಂಜಿನಪ್ಪ, ಮುಖಂಡರಾದ ಮಂಜುನಾಥ್, ಪಿ.ಮಹದೇವ್, ಬೀರಗೊಂಡನಹಳ್ಳಿಗೋವಿ, ಮರಿವೆಂಕಟಪ್ಪ, ಕಲ್ಯಾಣಿನಾಗರಾಜು, ಶ್ರೀನಿವಾಸ್, ಮೂರ್ತಿ, ವೆಂಟಕೇಶ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net