

ಬೀದರ್: ಸಂಘಟನೆ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸ್ಥಾನದಿಂದ ಪ್ರದೀಪ ಹೆಗಡೆ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫನಾರ್ಂಡಿಸ್ ಹಿಪ್ಪಳಗಾಂವ್ ತಿಳಿಸಿದ್ದಾರೆ.
ಸಮಿತಿಯ ನೂತನ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಹುದ್ದೆ ಆಯ್ಕೆಗಾಗಿ ಸೋಮವಾರ ನಗರದಲ್ಲಿ ಸಭೆ ನಡೆಯಿತು. ವಿಜಯಕುಮಾರ ಹಿಪ್ಪಳಗಾಂವ (ಜಿಲ್ಲಾಧ್ಯಕ್ಷ), ದತ್ತಾತ್ರಿ ಜ್ಯೋತಿ (ಕಾರ್ಯಾಧ್ಯಕ್ಷ), ಕಮಲಾಕರ ಹೆಗಡೆ (ಉಪಾಧ್ಯಕ್ಷ), ಡೇವಿಡ್ ನಾಮದಾಪೂರ (ಮಹಾಪ್ರಧಾನ ಕಾರ್ಯದರ್ಶಿ), ಸ್ವಾಮಿದಾಸ ಮೇಘಾ (ಪ್ರಧಾನ ಕಾರ್ಯದರ್ಶಿ), ಜೈಶೀಲ ಕಲವಾಡ (ಸಂಘಟನಾ ಕಾರ್ಯದರ್ಶಿ), ಜಯರಾಜ್ ಚಿಲ್ಲರ್ಗಿ (ಸಹ ಕಾರ್ಯದರ್ಶಿ), ಜೈಶೀಲ ಮೇತ್ರ (ಖಜಾಂಚಿ), ಪೀಟರ್ ಶ್ರೀಮಂಡಲ (ವಕ್ತಾರ) ಅವರನ್ನು ನೇಮಕ ಮಾಡಲಾಗಿದೆ.
ಸಭೆಯಲ್ಲಿ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫನಾರ್ಂಡಿಸ್ ಹಿಪ್ಪಳಗಾಂವ, ನರೇಂದ್ರ ಬಾಬು ಮಾದಿಗ, ಚಂದ್ರಕಾಂತ ಹಿಪ್ಪಳಗಾಂವ ಇತರರಿದ್ದರು.