ಮಾದಲಗೆರೆಯಲ್ಲಿ ನೂರೊಂದು ಎಡೆಯೋತ್ಸವ

28 HRS 01
Published on

ಹಿರೀಸಾವೆ: ಹೋಬಳಿಯ ಮಾದಲಗೆರೆ ಗ್ರಾಮದಲ್ಲಿ ದೇವತೆಗಳ ಉತ್ಸವ, ದಾಸಪ್ಪನ ಹರಿಸೇವೆ ಹಾಗೂ ನೂರೊಂದು ಎಡೆಯೋತ್ಸವವು ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಹಿನ್ನೆಲೆ ಗ್ರಾಮದ ಎಲ್ಲ ದೇಗುಲಗಳಿಗೆ ಹೂವಿನ ಚಪ್ಪರ ಹಾಕಲಾಗಿದ್ದು ಬಾಳೆಕಂದು ಕಟ್ಟಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ಗಂಗಾಪೂಜೆ ಹಾಗೂ ವಿಘ್ನೇಶ್ವರ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡವು.
ಗ್ರಾಮದೇವತೆ ಆಂಜನೇಯಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು. ಮಹದೇಶ್ವರಸ್ವಾಮಿಯ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ಸ್ವಾಮಿ ಮೆರವಣಿಗೆಯೂ ರಾಮನಗರ ಜಿಲ್ಲೆಯ ಕವಣಾಪುರ ಬಸವಣ್ಣ (ಶಿವನಂದಿ) ಮತ್ತು ಪೂರ್ಣಕುಂಭದೊಂದಿಗೆ ಕೆರೆಯ ಬಳಿ ಪ್ರಾರಂಭವಾಯಿತು. ದೇವತೆಗಳ ಉತ್ಸವ ಸಾಗಿದಂತೆಲ್ಲ ಹೆಣ್ಣು ಮಕ್ಕಳು ಆರತಿ ಹಿಡಿದು ಸಾಗಿದರೆ ಭಕ್ತರು ಕರ್ಪೂರ ಬೆಳಗಿಸಿ ಈಡುಗಾಯಿ ಒಡೆದರು. ಉತ್ಸವದಲ್ಲಿ ಕಲಾವಿದರಾದ ರಂಜನಪ್ರಸಾದ್ ಹಾಗೂ ಶಿವಪ್ರಸಾದ್ ತಂಡದ ವೀರಭದ್ರನ ಕುಣಿತ ನೋಡುಗರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net