

ಮೈಸೂರು: ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ದೇಶದಲ್ಲೇ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಡಾ. ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. ವಾಕ್ ಮತ್ತು ಶ್ರವಣ ಸಮಸ್ಯೆಯುಳ್ಳ ಸಾವಿರಾರು ಮಕ್ಕಳು, ವಯಸ್ಕರು ಇಲ್ಲಿ ಚಿಕಿತ್ಸೆ, ತರಬೇತಿ ಪಡೆದುಕೊಂಡು ಹೋಗುತ್ತಾರೆ. ಇಲ್ಲಿರುವ ಸಿಬ್ಬಂದಿಯೂ ತಾಳ್ಮೆ, ಸಹನೆಯಿಂದ ತರಬೇತಿ ಕೊಟ್ಟು ಸಮಸ್ಯೆ ಇರುವವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶ್ರವಣದೋಷ ಮಕ್ಕಳ ತರಬೇತಿ ಶಾಲೆಗೆ ಭೇಟಿ ನೀಡಿದ ಡಾ. ಮಂಜುನಾಥ್, ಮಕ್ಕಳ ಮಾತಿನ ತರಬೇತಿ, ಕಲಿಕಾ ಕೇಂದ್ರಗಳ ಪರಿಶೀಲನೆ ಮಾಡಿದರು. ಶ್ರವಣ ದೋಷವಿರುವ ಮಕ್ಕಳೊಂದಿಗೆ ಕೆಲ ಸಮಯ ಕಳೆದರು.