

ಕಲಬುರಗಿ: ಜಲ ಸಂರಣೆಗಾಗಿ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ೧೦ ಮಾದರಿ ಹಳ್ಳಿಗಳನ್ನು ರೂಪಿಸಲು ಕಲಬುರಗಿ ಜಿಲ್ಲಾ ಪಂಚಾಯಿತಿಯ ಕನ್ಸರ‍್ಟಿಯಂ ಫಾರ್ ಡಿಯಾಟ್ಸ್ ಡಿಸೆಮಿನೇಫಿನ್ (ಸಿಡಿಡಿ) ಸಂಸ್ಥೆ ಜತೆಗೆ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆ ಅವರ ಸಮಕ್ಷಮ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಮತ್ತು ಸಿಡಿಡಿ ಸಂಸ್ಥೆ ಅಧಿಕಾರಿ ಯೋಗೇಶ ಒಪ್ಪಂದಕ್ಕೆ ಸಹಿ ಮಾಡಿ ಪರಸ್ಪರ ಪತ್ರ ವಿನಿಮಯ ಮಾಡಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೆರೆ, ಗೋಕಟ್ಟೆ, ಪುಷ್ಕರಣಿ, ಬಾವಿ ಸೇರಿ ವಿವಿದ ಜಲಮೂಲಗಳನ್ನು ಸಂರಣೆ ಜತೆಗೆ ಕೆರೆ, ಚೆಕ್ ಡ್ಯಾಂ ನರ‍್ಮಿಸುವ, ಆರೋಗ್ಯ ನರ‍್ಮಲ್ಯ ಕಾಪಾಡುವ, ಪರಿಸರಕ್ಕೆ ಪೂರಕ ಚಟುವಟಿಕೆ ಕೈಗೊಳ್ಳಲು ಪ್ರಾಯೋಗಿಕವಾಗಿ ೧೦ ಹಳ್ಳಿ ಮಾದರಿ ರೂಪಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಜಲ ಸಂರಣೆ, ತ್ಯಾಜ್ಯ ನೀರು ಸಂರಣಾ ಠಕ ಸ್ಥಾಪನೆ, ಘನ ಮತ್ತು ದ್ರವ್ಯ ತ್ಯಾಜ್ಯ ನರ‍್ವಹಣೆ, ಮಳೆ ನೀರು ಕೋಯ್ಲು ಸೇರಿ ಗ್ರಾಮಸ್ಥರ ಸಹಭಾಗಿತ್ವದ ಅನುಷ್ಠಾನದ ಗುರಿ ಹೊಂದಲಾಗಿದೆ. ಕೆರೆ ಕಟ್ಟೆಗಳಲ್ಲಿ ಕೊಳಚೆ ತೆಗೆಯುವ, ಕೆರೆ, ಚೆಕ್ ಡ್ಯಾಂ ರಸಿ ಸಾರ‍್ಥ್ಯ ಹೆಚ್ಚಿಸುವುದು. ಜಲ ಮೂಲಗಳ ರಣೆ, ವೃ ಸಂಗೋಪನೆ ಮಾಡಲಾಗುವುದು ಎಂದರು.
ಕೊಳಚೆ ನರ‍್ವಹಣೆ, ಮೂಲ ಸೌರ‍್ಯ ಬಲರ‍್ಧನೆಗೆ ಇರುವ ಕೊರತೆ ಪತ್ತೆ ಹಚ್ಚಿ, ಪರಿಹಾರ ಒದಗಿಸುವುದು. ಒಪ್ಪಂದದ ಪ್ರಕಾರ ೧೦ ಹಳ್ಳಿಗಳಲ್ಲಿ ಗ್ರೇ ವಾಟರ್ ಶುದ್ದೀಕರಣ ಟಕ ಮತ್ತು ಡಿಪಿಆರ್ ಸಿದ್ಧಪಡಿಸಿ ಮೂರು ಹಳ್ಳಿಗಳಲ್ಲಿ ಟಕ ಸ್ಥಾಪಿಸುವುದು. ಐದು ಹಳ್ಳಿಗಳಲ್ಲಿ ಶಾಲಾ ನರ‍್ಮಲ್ಯ ವ್ಯವಸ್ಥೆ ಸ್ಥಾಪನೆ. ವೈಜ್ಞಾನಿಕ ತ್ಯಾಜ್ಯ ನರ‍್ವಹಣೆ ಅನುಷ್ಠಾನ ಮಾಡಲಾಗುವುದು ಎಂದರು.
ರ‍್ನಾಟಕ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಶಾಸಕರಾದ ಎಂ.ವೈ.ಪಾಟೀಲ್, ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ್, ಅವಿನಾಶ ಜಾಧವ್, ಕನೀಜ್ ಫಾತಿಮಾ, ಚಂದ್ರಶೇಖರ ಪಾಟೀಲ್, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಕೂಡಾ ಅಧ್ಯ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.