ಮಾದರಿ ಮಾರುಕಟ್ಟೆ ನಿರ್ಮಾಣಕ್ಕೆ ಶ್ರಮ

klb3
ಅಫಜಲಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಿಸಿ ರಸ್ತೆ ಮತ್ತು ಶೌಚಗೃಹ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ವೈ.ಪಾಟೀಲ್ ಅಡಿಗಲ್ಲು ನೆರವೇರಿಸಿದರು. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಎಂ.ಎಸ್.ರಾಜಶ್ರೀ, ಸಂಜೀವಕುಮಾರ ದಾಸರ, ಎಸ್.ಎಸ್.ಜಹಾಗಿರದಾರ ಇದ್ದರು.
Published on

ಅಫಜಲಪುರ: ನಮ್ಮದು ರೈತ ಪರ ಸರ್ಕಾರವಾಗಿದ್ದು, ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹಲವಾರು ಕಾಯ್ದೆಗಳನ್ನು ಜಾರಿಗೆ ತಂದಿದೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ರಾಜ್ಯದಲ್ಲಿ ಮಾದರಿಯಾಗಿಸಲು ಶ್ರಮಿಸಲಾಗುವುದು ಎಂದು ಶಾಸಕ ಎಂ.ವೈ.ಪಾಟೀಲï ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಾರ್ಷಿಕ ಕ್ರಿಯಾಯೋಜನೆಯಡಿ 87 ಲಕ್ಷ ರೂ. ವೆಚ್ಚದ ಆಡಳಿತ ಕಚೇರಿ ಉದ್ಘಾಟನೆ, ಆರ್‌ಐಡಿಎಫ್-29 ಯೋಜನೆಯಡಿ 1.50 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಶೌಚಗೃಹ ನಿರ್ಮಾಣ ಕಾಮಗಾರಿಗೆ ಸೋಮವಾರ ಅಡಿಗಲ್ಲು ನೆರವೇರಿಸಿ ಮಾತನಾಡಿ, ಮಹಾರಾಷ್ಟç ಗಡಿಯಲ್ಲಿರುವ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ವಿಭಾಗೀಯ ಅಧಿಕಾರಿಗಳು ಹೆಚ್ಚಿನ ಅನುದಾನ ನೀಡುವುದರ ಜತೆಗೆ ರೈತ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೃಷಿ ಇಲಾಖೆ ವಿಭಾಗೀಯ ಹೆಚ್ಚುವರಿ ನಿರ್ದೇಶಕಿ ಎಂ.ಎಸ್.ರಾಜಶ್ರೀ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಎಪಿಎಂಸಿ ಇಇ ಎಸ್.ಎಸ್.ಜಹಾಗಿರದಾರ, ಎಇಇ ಪಿ.ವಿ. ವಾಘಮೋರೆ, ಸಹಾಯಕ ನಿರ್ದೇಶಕಿ ಸವಿತಾ ನಾಯಕ, ಕಾರ್ಯದರ್ಶಿ ಸಂತೋಷ ಬುಡಗೆ, ಬ್ಲಾಕ್ ಕಾಂಗ್ರೆಸï ಪ್ರಧಾನ ಕಾರ್ಯದರ್ಶಿ ಶಿವಾನಂದ ಗಾಡಿಸಾಹುಕಾರ, ಪ್ರಮುಖರಾದ ಪಪ್ಪು ಪಟೇಲï, ಪ್ರಕಾಶ ಜಮಾದಾರ, ಚಂದು ದೇಸಾಯಿ, ಶ್ರೀಕಾಂತ ಮ್ಯಾಳೇಶಿ, ಸಂತೋಷ ದಾಮಾ, ಶರಣು ನೂಲಾ, ಮಲ್ಲಪ್ಪ ಗುಣಾರಿ, ಶ್ರೀಕಾಂತ ಕಲಕೇರಿ, ಚನ್ನಬಸಯ್ಯ ಹಿರೇಮಠ, ಸೂರ್ಯಕಾಂತ ಹಿರೇಮಠ, ಧರೇಶ ಅಂಜುಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net