ಮಾದಯ್ಯ ಅವರಂತೆ ಕಾಯಕ ನಿಷ್ಠೆ ಅಳವಡಿಸಿಕೊಳ್ಳಿ

20 KAMPLI 02
Published on

ಕಂಪ್ಲಿ: ಶಿವಶರಣ ಹೂಗಾರ ಮಾದಯ್ಯ ಅವರ ಕಾಯಕ ನಿಷ್ಠೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಎಮ್ಮಿಗನೂರಿನ ಹಂಪಿ ಸಾವಿರದೇವರ ಮಠದ ಶ್ರೀ ವಾಮದೇವ ಶಿವಾಚಾರ್ಯರು ಹೇಳಿದರು.

ಎಮ್ಮಿಗನೂರಿನ ಹಂಪಿ ಸಾವಿರದೇವರ ಮಠದಲ್ಲಿ ಶಿವಶರಣ ಹೂಗಾರ ಮಾದಯ್ಯ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು. ಆರಾಧನೆಗಾಗಿ ಜನರಿಗೆ ಹೂಮಾಲೆ, ಪತ್ರೆ, ಪುಷ್ಪ ಒದಗಿಸುವ ಕಾಯಕದೊಂದಿಗೆ ಶರಣ ಚಿಂತನೆಯನ್ನು ಹೂಗಾರ ಮಾದಯ್ಯ ಅಳವಡಿಸಿಕೊಂಡಿದ್ದರು. ಹೂಗಾರ ಸಮುದಾಯವರು ಸಂಘಟಿತರಾಗುವ ಮೂಲಕ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ವೀರಶೈವ ಲಿಂಗಾಯತ ಹೂಗಾರ ಸಮಾಜದ ತಾಲೂಕು ಕಾರ್ಯದರ್ಶಿ ಜೀರ್ ಲೋಕೇಶ್ ಮಾತನಾಡಿ, ಎಮ್ಮಿಗನೂರು ಗ್ರಾಮದ ರಸ್ತೆಗೆ ಶಿವಶರಣ ಹೂಗಾರ ಮಾದಯ್ಯ ಹೆಸರಿಡಬೇಕು ಹಾಗೂ ಮಾದಯ್ಯ ಹೆಸರಿನ ವೃತ್ತ ನಿರ್ಮಿಸುವಲ್ಲಿ ಗ್ರಾಮಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಅಂಗಡಿ ಜಡೇಮೂರ್ತಿ, ಪ್ರಮುಖರಾದ ಬಿ.ಮಹೇಶಗೌಡ, ಬಿ.ಸದಾಶಿವಪ್ಪ ಧಣಿ, ಎಚ್.ರುದ್ರಪ್ಪ, ವೀರಶೈವ ಲಿಂಗಾಯತ ಹೂಗಾರ ಸಮಾಜದ ತಾಲೂಕು ಅಧ್ಯಕ್ಷ ಜೀರ್ ಹಾಲೇಶಪ್ಪ, ಉಪಾಧ್ಯಕ್ಷ ಜೀರ್ ಸೂಗೂರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net