ಮಾದನಾಯಕನಹಳ್ಳಿಯಲ್ಲಿ ಮೊಗಳ್ಳಿ ಗಣೇಶ್ ಅಂತ್ಯ ಸಂಸ್ಕಾರ

05M.D.R.2
Published on

ಮದ್ದೂರು: ಕನ್ನಡದ ಪ್ರಮುಖ ಕವಿ, ಕಥೆಗಾರ ಮೊಗಳ್ಳಿ ಗಣೇಶ್ ಅವರ ಅಂತ್ಯ ಸಂಸ್ಕಾರ ಭಾನುವಾರ ಸಂಜೆ ಮಾದನಾಯಕನಹಳ್ಳಿ ಗ್ರಾಮದ ತೋಟದಲ್ಲಿ ನೆರವೇರಿತು.

ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಂತೆ ಮೊಗೇನಹಳ್ಳಿ ಗ್ರಾಮದವರಾದ ಗಣೇಶ್ ಅವರ ಅಕ್ಕ ಗೌರಮ್ಮ, ಮಾವ ಪುಟ್ಟಸ್ವಾಮಿ ಅವರ ಜಮೀನಿನಲ್ಲಿ ಹಿಂದು ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ವಿಜಯನಗರ ಜಿಲ್ಲೆ ಹೊಸಪೇಟೆಯಿಂದ ಆಂಬುಲೆನ್ಸ್ ಮೂಲಕ ಪಾರ್ಥಿವ ಶರೀರವನ್ನು ಸಂಜೆ 4 ಗಂಟೆಗೆ ತರಲಾಯಿತು. ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಗಣೇಶ್ ಅವರು ಮಾದನಾಯಕನಹಳ್ಳಿಯಲ್ಲಿರುವ ಅಕ್ಕನ ತೋಟದಲ್ಲಿ ಕುಳಿತು ಸಾಹಿತ್ಯ ರಚನೆ ಮಾಡುತ್ತಿದ್ದರು. ಹಾಗಾಗಿ ಮಾದನಾಯಕನಹಳ್ಳಿ ಮೇಲೆ ವಿಶೇಷ ಪ್ರೀತಿಯಿತ್ತು ಎಂದು ಕುಟುಂಬದವರು ತಿಳಿಸಿದರು.

ಗಣೇಶ್ ಅವರ ಪತ್ನಿ ಶೋಭಾ, ಪುತ್ರಿಯರಾದ ಚಂದನಾ, ವಂದನಾ, ಸಿರಿ, ಅಕ್ಕ ಗೌರಮ್ಮ, ಮಾವ ಪುಟ್ಟಸ್ವಾಮಿ, ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಭಾಸ್ಕರ್, ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ್, ಕೊಟಗಾನಹಳ್ಳಿ ರಾಮಯ್ಯ, ತುಕಾರಾಮ್, ಪ್ರೊ.ಜೆ.ಸೋಮಶೇಖರ್, ನರೇಂದ್ರಕುಮಾರ್, ಚಿನ್ನಸ್ವಾಮಿ, ಶಶಿಧರ್, ಮಹದೇವ, ಸ್ವಾಮಿ ಆನಂದ್, ಎಲಿಯೂರು ಧನಂಜಯ, ದೇವನೂರು ಬಸವರಾಜು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net