ಮಾದನಹಿಪ್ಪರಗಿಯಲ್ಲಿ ಪ್ರಗತಿ ಬಂಧು ಸಾಧನಾ ಸಮಾವೇಶ

PH 03
Published on

ಆಳಂದ: ಸ್ಥಳೀಯ ಬ್ಯಾಂಕ್‌ಗಳಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ಕೊಡಲು ಶಿಪಾರಸು ಮಾಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಜೀವನ ಸಾಗಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಾಗಿದೆ ಎಂದು ಯೋಜನೆ ಬಿ.ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ ಹೇಳಿದರು.

ಮಾದನಹಿಪ್ಪರಗಾದ ಶರಣ ಶಿವಲಿಂಗೇಶ್ವರ ಸಭಾಗೃಹದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮೂಹಿಕ ವರಮಹಾಲಕ್ಷಿö್ಮÃ ಪೂಜೆ ಮತ್ತು ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಉತ್ತಮ ಪರಿಸರ ನಿರ್ಮಾಣ ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಂದೊAದು ಗಿಡ ನೆಡಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಸಂಸ್ಥೆಯಿAದ ಮೂರು ಲಕ್ಷ ಗಿಡಗಳನ್ನು ನೆಟ್ಟಿದ್ದು, 30 ಕೆರೆ ನಿರ್ಮಿಸಲಾದೆ. ಶಾಲಾಭಿವೃದ್ಧಿ, ನಿರ್ಗತಿಕ ಮಾಸಾಶನ, ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ, ಮಹಿಳಾ ಸದಸ್ಯರು ಗುಡಿ ಕೈಗಾರಿಕೆಗೆ 3 ಲಕ್ಷ ರೂ.ವರೆಗೆ ಸಾಲಸೌಕರ್ಯ ಒದಗಿಸಲಾಗುತ್ತಿದೆ. ಶ್ರೀ ವಿರೇಂದ್ರ ಹೆಗ್ಗಡೆ ಸಂಸದರಾದ ನಂತರ ಹೈನುಗಾರಿಕೆಗೆ ಅನುದಾನ ನೀಡಿದ್ದು, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಶ್ರಮಿಸಲಾಗುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲೂಕಾ ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಕಿ ಪ್ರಾಸ್ತಾವಿಕ ಮಾತನಾಡಿದರು. ಪಿಎಸ್‌ಐ ದಿನೇಶ, ಮಲ್ಲಿನಾಥ ಮೈಂದರ್ಗಿ, ಮಲ್ಲಯ್ಯ ಸ್ವಾಮಿ, ಸಿದ್ದು ತೋಳನೂರ, ಸಿದ್ದಾö್ದರೂಢ ಜಳಕೋಟಿ, ಗ್ರಾಪಂ ಅಧ್ಯಕ್ಷೆ ಸುವರ್ಣಾ ಮೈಂದರ್ಗಿ ಇತರರಿದ್ದರು. ಪ್ರಮೋದ ಹೂಗಾರ ನಿರೂಪಣೆ ಮಾಡಿದರು. ಚೆನ್ನಮ್ಮ ಹೊಸಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net