ಮಾದಕವಸ್ತು ವ್ಯಸನದ ವಿರುದ್ಧ ಹೋರಾಟ ಅಗತ್ಯ

25 Vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾದಕ ವ್ಯಾಸನವು ಮೂಲತಃ ಮೆದುಳಿನ ಕಾಯಿಲೆ. ಮಾದಕ ವ್ಯಸನದ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸದೆ ವ್ಯಸನದ ವಿರುದ್ಧ ಎಲ್ಲರೂ ಹೋರಾಟ ಮಾಡುವುದು ಅತ್ಯಂತ ಅವಶ್ಯವಾಗಿದೆ ಎಂದು ಎಂದು ಉಪ ಪೊಲೀಸ್ ಆಯುಕ್ತ ರಾಜು ಎಂ. ಹೇಳಿದರು.
ನಗರದ ಕೆಸಿಡಿ ಕಾಲೇಜು ಮೈದಾನದಲ್ಲಿ ಹು-ಧಾ ನಗರ ಪೊಲೀಸ್ ಆಯುಕ್ತಾಲಯ ಹಾಗೂ ಆರೋಹಣ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತು ವ್ಯಸನದ ವಿರುದ್ಧದ ಜಾಗೃತಿಗಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿರು.
ಸಣ್ಣ ವಯಸ್ಸಿನಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾದ ಯುವಕರು ಅದರಿಂದ ಹೊರಬರದೆ ಜೀವನ ಹಾಳು ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಪೋಷಕರ, ಹಿರಿಯರ ನೆರವು ಸಿಗದೆ ಬದುಕು ಕಮರಿಹೋಗಿತ್ತಿವೆ. ಮಾದಕ ವ್ಯಸನದಿಂದ ಆಗುವ ಶಾರೀರಿಕ ಬದಲಾವಣೆ, ಪರಿಣಾಮ ಸಹಿಸಿಕೊಳ್ಳುವುದೂ ಕಷ್ಟವಾಗಿದೆ. ಡ್ರಗ್ಸ್ ಪ್ರತಿ ದೇಶದ ಯುವಕರ ಮೇಲೆ ಪರಿಣಾಮ ಬೀರಲು ಆರಂಭಿಸಿದೆ. ಡ್ರಗ್ಸ್ ವ್ಯಸನಿಗಳ ಮನಸ್ಸು ಮತ್ತು ದೇಹದ ಜೀವ ಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಯುವಕರು ಆರೋಗ್ಯದತ್ತ ಕಾಳಜಿವಹಿಸಬೇಕು ಎಂದರು. ಮಹಾನಗರಪಾಲಿಕೆ ಆಯುಕ್ತ ಡಾ. ಗೋಪಾಲ ಕೃಷ್ಣ. ಬಿ., ಸಹಾಯಕ ಪೊಲೀಸ ಆಯುಕ್ತ ವಿಜಯ ಕುಮಾರ ಟಿ., ಸಿಪಿಐ ಶಂಕರಗೌಡ ಬಸವನಗೌಡ, ಪೊಲೀಸ್ ಅಧಿಕಾರಿಗಳು, ಆರೋಹಣ ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net