ಮಾದಕ ವಸ್ತುಗಳಿಂದ ದೂರವಿರಿ

29 GBD
Published on

ಗೌರಿಬಿದನೂರು: ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನ್ಯಾಯಾಲಯಗಳು ಮುಂದಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ರೇಣುಕಾದೇವಿದಾಸ್ ರಾಯ್ಕರ್ ತಿಳಿಸಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾಸಮಿತಿ ಮತ್ತು ವಕೀಲ ಸಂಘ, ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ, ತಾಲೂಕು ಅಡಳಿತದಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಮಾದಕ ವಸ್ತುಗಳ ನಿಷೇಧ ನಿಯಮ-2015ರ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಹವಾಸ ದೋಷದಿಂದ ಮಾದಕ ವಸ್ತುಗಳ ವ್ಯಸನಕ್ಕೆ ಹೆಚ್ಚಾಗಿ ಶಾಲಾ ಮಕ್ಕಳು ಬಲಿಯಾಗುತ್ತಿದ್ದು, ಬಾಲ್ಯದಿಂದಲೇ ಇವುಗಳಿಂದ ದೂರವಿರುವ ಜಾಗೃತಿ ಮೂಡಿಸಬೇಕಿದೆ ಎಂದರು.

ಮಾದಕ ವಸ್ತುಗಳ ಸೇವನೆ ಮೊದಲ ಅಸಕ್ತಿಯಿಂದ ಆರಂಭವಾಗಿ ಅನಂತರ ಅಭ್ಯಾಸವಾಗಿ ಕೊನೆಗೆ ವ್ಯಸನವಾಗಿ ಬದಲಾಗುತ್ತದೆ, ಇದರಿಂದ ಮೆದಳಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ, ವ್ಯಸನಿಗಳಲ್ಲಿ ಅತ್ಮಹತ್ಯೆಯ ಅಲೋಚನೆ, ಮಂಕಾಗಿರುವುದು, ಅತಿ ಸಂಶಯ ಸೇರಿ ವಿಚಿತ್ರ ವರ್ತನೆ ಕಾಣಬಹುದು ಎಂದು ಮಾನಸಿಕ ರೋಗ ತಜ್ಞ ಡಾ.ಹೇಮಂತ್ ಕುಮಾರ್ ಜಿ. ಮಾಹಿತಿ ನೀಡಿದರು.

ಗರ್ಭೀಣಿ ಮತ್ತು ಬಾಣಂತಿಯರು ಸಮತೋಲನ ಆಹಾರ, ಸೊಪ್ಪು ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ಉತ್ತಮ ಅರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಾಲೂಕು ಅಧಿಕಾರಿ ಡಾ.ಓ.ರತ್ನಮ್ಮ ತಿಳಿಸಿದರು.

ಪಿಎಸ್ಸೈ.ಮೋಹನ್, ವಕೀಲರ ಸಂಘದ ಅಧ್ಯಕ್ಷ ವಿ.ಸಿ.ಗಂಗಯ್ಯ ಕಾರ್ಯದರ್ಶಿ ಬಿ.ಲಿಂಗಪ್ಪ, ಸಹಾಯ ಸರ್ಕಾರಿ ಅಭಿಯೋಜಕ ಅಧಿನಾರಾಯಣಸ್ವಾಮಿ, ವಕೀಲರಾದ ವಿ,ಗೋಪಾಲ್, ನ್ಯಾಯಲಯ ಸಿಬ್ಬಂದಿ ಸಂಧ್ಯಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net