ಮಾದಕ ವಸ್ತು ಸೇವನೆಯಿಂದ ದೂರವಿರಲಿ

23ATHANIGRAMIN1
Published on

ಅಥಣಿ ಗ್ರಾಮೀಣ: ಮಾದಕ ಪದಾರ್ಥಗಳ ಸೇವನೆಯಿಂದ ಯುವಜನತೆ ದೂರವಿರಬೇಕು. ಇಂತಹ ದುಶ್ಚಟಗಳ ವಿರುದ್ಧ ಆಂದೋಲನ ಮಾಡಬೇಕು ಎಂದು ಐಗಳಿ ಪಿಎಸ್‌ಐ ಚಂದ್ರಶೇಖರ ಸಾಗನೂರ ಕರೆ ನೀಡಿದರು,

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಐಗಳಿ ಪೊಲೀಸ್ ಠಾಣೆ ವತಿಯಿಂದ ಸೋಮವಾರ ಆಯೋಜಿಸಿದ್ದ ಮಾದಕ ವಸ್ತುಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವುದೇ ಸಮಸ್ಯೆಯಾದಲ್ಲಿ ವಿದ್ಯಾರ್ಥಿನಿಯರು ೧೧೨ಗೆ ಕರೆ ಮಾಡಿ ತಿಳಿಸಬೇಕು, ಜನರಿಗೆ ಕಾನೂನು ಅರಿವು ಮತ್ತು ನೆರವು ಸಿಗುವ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಹಿರಿಯ ಉಪನ್ಯಾಸಕ ದುಂಡಪ್ಪ ಹುಲ್ಲೇಣ್ಣವರ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಽಕಾರಿ ಪ್ರಶಾಂತ ಬಡಿಗೇರ, ಸಂಜು ಸನಗೊಂಡ, ಪಾರೀಸ್ ಕಾಂಬಳೆ, ರತನ ಅಂಬಾಜಿ, ಪಾಂಡು ಚವ್ಹಾಣ, ಮೀನಾಕ್ಷಿ, ನಂದೇಶ್ವರ, ಶ್ರುತಿ ಅನಗಲಿ, ಸುಧಾ ನೇಮಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net