ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರ ಬಂಧನ

2Ravig8-Web
ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಿಐ ದಿಲೀಪ್ ನಿಂಬಾಳ್ಕರ್, ಸಿಬ್ಬಂದಿ ಶಂಕರ ಶಿಂಧೆ, ಮಹಾಂತೇಶ ಹನಗಂಡಿ, ವಿಜಯ ಕಟ್ಟೀಕಾರ, ಬಸವರಾಜ ಉಜ್ಜಿನಕೊಪ್ಪ ಇದ್ದಾರೆ.
Published on

ಬೆಳಗಾವಿ: ನಗರದಲ್ಲಿ ಶುಕ್ರವಾರ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಸಾವಿರಾರು ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ದರ್ಬಾರ್ ಗಲ್ಲಿ ನಿವಾಸಿ ಅರಗಬಾನ್ ಘೋರಿ ಹಾಗೂ ಖಂಜರ್ ಗಲ್ಲಿಯ ಯೂನಿಸ್ ಮಕಾನದಾರ್ ಬಂಧಿತರು. ಇಲ್ಲಿನ ಚಿರಾಗ ನಗರದಲ್ಲಿ ಮಾದಕ ವಸ್ತು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಬಂಧಿತರಿಂದ 17 ಗ್ರಾಂ ಪೆನ್ನಿ ವಶಪಡಿಸಿಕೊಂಡಿದ್ದಾರೆ. ಇನ್ನೂ ಮೂವರು ಪರಾರಿಯಾಗಿದ್ದಾರೆ. ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net