ಮಾದಕ ವಸ್ತು ಸಾಗಾಟ, ಮಾರಾಟ, ಸೇವನೆಗೆ ಶಿಕ್ಷೆ ಗ್ಯಾರಂಟಿ

CTD MADAK POLICE-------------------------
Published on

ಚಿತ್ರದುರ್ಗ: ಮಾದಕ ವಸ್ತುಗಳ ಸೇವನೆ ದುಶ್ಚಟ, ನರಕಕ್ಕೆ ದಾರಿ ತೋರಿಸುತ್ತವೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಯುವ ಜನರನ್ನು ಎಚ್ಚರಿಸಿದರು.

ಅಂತಾರಾಷ್ಟ್ರೀಯ ಮಾದಕ ದ್ರವ್ಯಗಳ ಬಳಕೆ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ನಗರದಲ್ಲಿ ಗುರುವಾರ ಒನಕೆ ಓಬವ್ವ ವೃತ್ತದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾದ ಸಭಾ ಕಾರ‌್ಯಕ್ರಮದಲ್ಲಿ ಮಾತನಾಡಿ, ಮಾದಕ ವಸ್ತುಗಳ ಸಾಗಾಟ, ಮಾರಾಟ,ಬೆಳೆಸುವುದು ಮತ್ತು ಸೇವಿಸುವುದಕ್ಕೆ ಶಿಕ್ಷೆ ಗ್ಯಾರಂಟಿ. ಯಾವುದೇ ಕಾರಣಕ್ಕೂ ನಶೆ ಪದಾರ್ಥಗಳ ಸೇವನೆ ಬೇಡವೇ ಬೇಡ ಎಂದರು.

ಗಾಂಜಾ ಮೊದಲಾದ ಮಾದಕ ವಸ್ತುಗಳ ಮಾರಾಟ, ಸೇವನೆ ಇತ್ಯಾದಿ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಡ್ರಗ್ಸ್ ಫ್ರೀ ಕರ್ನಾ ಟಕ ಆ್ಯಪ್ ಮೂಲಕ ಮಾಹಿತಿ ಕೊಟ್ಟರೆ ಪೊಲೀಸರು ಕೂಡಲೇ ಕ್ರಮ ಜರುಗಿಸಲಿದ್ದಾರೆ. ಆ್ಯಪ್‌ನಲ್ಲಿ ಮಾಹಿತಿ ನೀಡುವವರು ತಮ್ಮ ಹೆಸರು ಮೊದಲಾದ ಯಾವುದೇ ವಿವರಗಳನ್ನು ಕೊಡಬೇಕಾಗಿಲ್ಲ. ಮೊಬೈಲ್ ಪ್ಲೇಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ ಎಂದ ಅವರು,ಪೊಲೀಸರಿಗೆ ಮಾಹಿತಿ ನೀಡಲು ನೆರವಾಗುವ ಕ್ಯೂಆರ್‌ಕೋಡ್ ಸ್ಟಿಕ್ಕರ್‌ನ್ನು ಬಿಡುಗಡೆ ಮಾಡಿದರು.

ನಗರದ ಗಾಂಧಿ ವೃತ್ತದಲ್ಲಿ ಜಾಥಾಕ್ಕೆ ಎಸ್‌ಪಿ ಹಸಿರು ನಿಶಾನೆ ತೋರಿಸಿದರು. ಅಲ್ಲಿಂದ ಆರಂಭವಾದ ಜಾಥಾ ಡಾ.ಬಿ.ಆರ್.ಅಂಬೇ ಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಅಲ್ಲಿ ಮಾನವ ಸರಪಳಿ ರಚಿಸಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲಾಯಿತು. ಎಸ್‌ಪಿ ಪ್ರತಿಜ್ಞಾ ವಿ ಧಿ ಬೋಧಿಸಿದರು. ಮಾದಕ ವಸ್ತುಗಳ ಸೇವನೆಯಿಂದಾಗುವ ಅನಾಹುತಗಳ ಘೋಷಣಾ ಫಲಕಗಳನ್ನು ಹಿಡಿದಿದ್ದ ವಿವಿಧ ಕಾಲೇಜು ವಿ ದ್ಯಾರ್ಥಿಗಳು, ನಾಗರಿಕರು ಜಾಗೃತಿ ಘೋಷಣೆಗಳೊಂದಿಗೆ ಜಾಥಾದಲ್ಲಿ ಸಾಗಿದರು.

ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‌ಪಿಗಳಾದ ಉಮೇಶ್ ಈಶ್ವರ್ ನಾಯಕ್, ದಿನಕರ್, ಪಿಐಗಳಾದ ವೆಂಕಟೇಶ್,ತಿಮ್ಮಣ್ಣ, ಪ್ರಕಾಶ್, ಉಮೇಶ್‌ಬಾಬು ಮತ್ತಿತರ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಔಷಧ ನಿಯುಂತ್ರಣಾಧಿಕಾರಿ ಗಿರೀಶ್, ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಜಿಲ್ಲಾ ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಓಂಕಾರಮೂರ್ತಿ, ಚಂದ್ರಮೋಹನ್‌ರೆಡ್ಡಿ, ವೀರೇಶ್, ಎಸ್‌ಜೆಎಂ ಫಾರ್ಮಾಸಿ ಪ್ರಾಚಾರ‌್ಯ ನಾಗರಾಜ್ ಮತ್ತಿತರರು, ಆದ್ಯ,ವಿವೇಕಾನಂದ ಫಾರ್ಮಾಸಿ ಮತಿತರ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

ಐನಹಳ್ಳಿ ಕುರುಬರಹಟ್ಟಿ ಶಾಲೆ

ದುಶ್ಚಟಗಳಿಂದ ದೂರವಿದ್ದಾಗ ಉತ್ತಮ ಅರೋಗ್ಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸಮಾಜ ವಿಜ್ಞಾನ ವಿಷಯ ಪರಿ ವೀಕ್ಷಕ ಕೆ.ಜಿ.ಪ್ರಶಾಂತ್ ಹೇಳಿದರು.

ಚಿತ್ರದುರ್ಗ ತಾಲೂಕು ಐನಹಳ್ಳಿ ಕುರುಬರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಡಯಟ್‌ನಿಂದ ಗುರುವಾರ ಆಯೋಜಿಸಿದ್ದ ವಿಶ್ವ ಮಾದಕ ವಸ್ತುಗಳ ಬಳಕೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿ, ದುಶ್ಚಟಗಳಿಂದ ದೂರವಿದ್ದಾಗ ಸಮಾಜದಲ್ಲಿ ಗೌರವ ದೊರೆಯುತ್ತದೆ. ನಾವು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ಜೀವನ ನಡೆಸಬೇಕೆಂದರು.

ಡಯಟ್ ಉಪನ್ಯಾಸಕ ಎಸ್.ಬಸವರಾಜು, ಆಂಗ್ಲಭಾಷೆ ವಿಷಯ ಪರಿವೀಕ್ಷಕ ಎಚ್.ಟಿ ಚಂದ್ರಣ್ಣ ಮಾತನಾಡಿದರು. ಮುಖ್ಯಶಿಕ್ಷಕ ಎಚ್.ಎನ್.ಮಂಜಪ್ಪ, ಚಾಪೆ ರೇವಣ್ಣ, ಟಿ.ಎಂ.ಸುಜಾತ, ಮಂಜುಳಾ ಕಿಲ್ಲೇದಾರ್, ಎಸ್.ಎಸ್.ರೇಖಾ, ಎಂ.ಎಚ್ ಮಂಜುಳಾ, ವೈ.ಪಾ ರ್ವತಮ್ಮ, ಆರ್.ಟಿ.ತ್ರಿವೇಣಿ, ಎಂ.ಜೆ.ಕೋಕಿಲಾ, ಮಲ್ಲಿಕಾರ್ಜುನ ಮತ್ತಿತರರಿದ್ದರು.

ರೆಡ್ ಕ್ರಾಸ್ ಸಂಸ್ಥೆ

ಆರೋಗ್ಯ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಗುರುವಾರ ಚಿತ್ರದುರ್ಗದಲ್ಲಿ ವಿಶ್ವ ಮಾದಕ ದ್ರವ್ಯ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಚಿತ್ರದುರ್ಗದ ಅಮೃತ್ ನರ್ಸಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಾಹಿತಿ, ಶಿಕ್ಷಣ ಹಾಗೂ ಸಂವ ಹನ ಕಾರ‌್ಯಕ್ರಮದಲ್ಲಿ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಜಿಲ್ಲಾಸ್ಪತ್ರೆ ಮಾನಸಿಕ ಆರೋಗ್ಯ ವಿಭಾಗದ ತಜ್ಞ ವೈದ್ಯ ಡಾ. ಶ್ರೀಧರ್, ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಗಾಯತ್ರಿ ಶಿವರಾಮ್, ಪ್ರಾಚಾರ‌್ಯ ಮೊಹಮ್ಮದ್ ವಜಹತ್‌ಉಲ್ಲಾ, ಸಂಸ್ಥೆ ಕಾರ‌್ಯದರ್ಶಿ ಎನ್.ಮಜಹರ್‌ಉಲ್ಲಾ, ಶಿವರಾಮ್ ಇತರರು ಇದ್ದರು.

------- ------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net