

ಬೆಳಗಾವಿ: ನಗರದ ವಿವಿಧ ಭಾಗಗಳಲ್ಲಿ ಮಾದಕ ವಸ್ತು ಮಾರಾಟ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರನ್ನು ಬಂಧಿಸಿ 40 ಸಾವಿರ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ನ್ಯೂ ಗಾಂಧಿ ನಗರದ ಯೂನುಸ್ ಸನದಿ, ವೀರಭದ್ರನಗರದ ಮುಶೈಬ ಪಟೇಲ ಬಂಧಿತರು. ಕಳೆದ ಹಲವು ದಿನಗಳಿಂದ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಬಹಿರಂಗವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಮತ್ತು ಸೇವನೆ ಮಾಡುವವರ ಕುರಿತು ನಾಗರಿಕರು ನೀಡಿದ ಮಾಹಿತಿ ಆಧಾರದ ಮೇಲೆ ಮಾರ್ಕೆಟ್ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 40 ಸಾವಿರ ರೂ. ಮ್ಯೌಲದ 48.22 ಗ್ರಾಂ ಹೆರಾಯಿನ್ ಜಪ್ತಿ ಮಾಡಿದ್ದಾರೆ.
ನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಕಂಗ್ರಾಳಿ ಬಿ.ಕೆ.ಗ್ರಾಮದ ಪರುಶರಾಮ ಕರಿಕಟ್ಟಿ, ಭರತ ನಗರದ ದೀಪಕ ಸಗಟಸಾ, ಮಹಾಂತೇಶ ನಗರದ ಮಹಾಂತೇಶ ಲಮಾಣಿ ಬಂಧಿಸಲಾಗಿದೆ. 43 ಸಾವಿರ ರೂ. ನಗದು, ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.