ಮಾದಕ ವಸ್ತು ಸಂಗ್ರಹಿಸಿದ್ದ ಯುವಕ ವಶಕ್ಕೆ

arrested
Published on

ಮೈಸೂರು: ನಗರದ ಸಾತಗಳ್ಳಿ ಪಾರ್ಕ್ ಬಳಿ ಮಾದಕ ವಸ್ತು ಇಟ್ಟುಕೊಂಡಿದ್ದ ವಿದ್ಯಾರ್ಥಿಯೊಬ್ಬನನ್ನು ನಗರದ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜೀವ್‌ನಗರದ ನಿವಾಸಿ, ಬಿ.ಕಾಂ ವಿದ್ಯಾರ್ಥಿಯೊಬ್ಬನ ಬಳಿ ಸುಮಾರು 5 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ.

ಸಿಸಿಬಿ ಇನ್‌ಸ್ಪೆಕ್ಟರ್ ಶಬ್ಬೀರ್ ಹುಸೇನ್ ಸಾತಗಳ್ಳಿ ಪಾರ್ಕ್ ಕಡೆಯಿಂದ ರಿಂಗ್ ರಸ್ತೆಗೆ ಹೋಗುತ್ತಿದ್ದಾಗ ಅಲ್ಲಿ ನಿಂತಿದ್ದ ಯುವಕ, ಪೊಲೀಸ್ ವಾಹನ ಕಂಡು ಓಡಲಾರಂಭಿಸಿದ.

ಇದರಿಂದ ಅನುಮಾನಗೊಂಡ ಇನ್‌ಸ್ಪೆಕ್ಟರ್ ಬೆನ್ನತ್ತಿ ಹಿಡಿದು ಪರಿಶೀಲಿಸಿದಾಗ ಆತನ ಬಳಿ ಎಂಡಿಎಂಎ ಪತ್ತೆಯಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net