ಮಾದಕ ದ್ರವ್ಯದಿಂದ ಜೀವನ ನಾಶ

sri drugs
ಮೆಣಸೆ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದಲ್ಲಿ ಮಾದಕದ್ರವ್ಯಮುಕ್ತ ಕರ್ನಾಟಕ ಭಿತ್ತಿಚಿತ್ರ ಬಿಡುಗಡೆಗೊಳಿಸಲಾಯಿತು. ಭಾರತಿ, ಸುನೀತಾ, ಸುಪ್ರೀತಾ ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಇದ್ದರು.
Published on

ಶೃಂಗೇರಿ: ಮಾದಕ ದ್ರವ್ಯ ಸೇವನೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ನಿರಂತರವಾಗಿ ಸೇವಿಸುವ ಮಾದಕ ದ್ರವ್ಯದಿಂದ ವ್ಯಕ್ತಿ ಸಮಾಜ ಹಾಗೂ ಕುಟುಂಬದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಾನೆ ಎಂದು ತಾಪಂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ವಿಭಾಗದ ವಲಯ ಮೇಲ್ವಿಚಾರಕಿ ಸುಪ್ರೀತಾ ಅಂಜನ್ ತಿಳಿಸಿದರು.

ಶನಿವಾರ ಮೆಣಸೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಲ್ಲಿ ಮಾದಕದ್ರವ್ಯಮುಕ್ತ ಕರ್ನಾಟಕ ಭಿತ್ತಿಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು. ನೇರವಾಗಿ ಮಿದುಳಿಗೆ ಅತ್ಯಂತ ಹೆಚ್ಚಿನ ಪರಿಣಾಮ ಮಾದಕದ್ರವ್ಯ ಸೇವನೆಯಿಂದ ಉಂಟಾಗುತ್ತದೆ. ಇದರಿಂದ ವ್ಯಕ್ತಿಯ ಜ್ಞಾಪಕ ಹಾಗೂ ನಿರ್ಣಯ ಶಕ್ತಿ ಜತೆ ಹೃದಯ, ಯಕೃತ್, ಶ್ವಾಸಕೋಶದ ತೊಂದರೆ ಎದುರಾಗುತ್ತದೆ. ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದರಿಂದ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಿ ಆತಂಕದಿಂದ ಜೀವನ ಸಾಗಿಸಬೇಕಾಗುತ್ತದೆ ಎಂದರು.

ಕೃಷಿಯೇತರ ವ್ಯವಸ್ಥಾಪಕಿ ಚೈತ್ರಾ ಮಾತನಾಡಿ, ಯುವಜನರು ರಾಷ್ಟ್ರದ ಶಕ್ತಿ. ಸಮಾಜ ಹಾಗೂ ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅನನ್ಯ. ಯುವಪೀಳಿಗೆ ಮಾದಕ ವ್ಯಸನಿಗೆ ತುತ್ತಾಗುತ್ತಿದೆ. ಜೀವನದ ಮೌಲ್ಯಗಳನ್ನು ಯುವಪೀಳಿಗೆ ಪ್ರೀತಿಸಬೇಕು. ಭಾರತದ ಭವಿಷ್ಯತ್ತಿನ ಬೆಳಕಾದ ಅವರನ್ನು ಉನ್ನತ ಸ್ಥಾನಕ್ಕೆ ತಲುಪಿಸುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ಹೇಳಿದರು.

ಮಾದಕದ್ರವ್ಯಮುಕ್ತ ಕರ್ನಾಟಕ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಿಬ್ಬಂದಿ ಪ್ರೀತಿಕ್ ಹೆಗ್ಡೆ, ವಿನಯ್, ಜಿಪಿಎಲ್‌ಎಫ್ ಪದಾಧಿಕಾರಿಗಳಾದ ಸುಭಾಷಿಣಿ, ಶಾಂತಾ, ಭಾರತಿ, ಪ್ರಮೀಳಾ, ಸುನೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net