ಮಾತ್ರೆ ಖರೀದಿಸುವಾಗಲೇ ಹೃದಯಾಘಾತಕ್ಕೆ ಬಲಿ

1 ckm 9 vishwanath
ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯ ವಿಶ್ವನಾಥ್(೬೫) ಮೃತ ದುರ್ದೈವಿ
Published on

ಚಿಕ್ಕಮಗಳೂರು: ಮೆಡಿಕಲ್‌ನಲ್ಲಿ ಮಾತ್ರೆ ಖರೀದಿಸುವ ಸಂದರ್ಭದಲ್ಲಿಯೇ ಹೃದಯಘಾತಕ್ಕೆ ಒಳಗಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ದೀಪ ನರ್ಸಿಂಗ್ ಹೋಮ್ ಬಳಿ ನಡೆದಿದೆ.

ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯ ವಿಶ್ವನಾಥ್(೬೫) ಮೃತ ದುರ್ದೈವಿ. ಮೆಡಿಕಲ್‌ನಲ್ಲಿ ಮಾತ್ರೆ ಖರೀದಿಸಿದ ವಿಶ್ವನಾಥ್ ಅಲ್ಲಿಯೇ ಮಾತ್ರೆ ತಿನ್ನಲು ನೀರನ್ನು ಕೇಳಿದ್ದಾರೆ. ಮೆಡಿಕಲ್ ಶಾಪ್ ಸಿಬ್ಬಂದಿ ನೀರನ್ನು ಕೊಡುತ್ತಿದ್ದಂತೆ ವಿಶ್ವನಾಥ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net