ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

1
Published on

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಮಹಿಳಾ ಲೇಖಕಿಯರಿಗೆ ಪ್ರೇರಣೆ ನೀಡಲು ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ನೀಡುತ್ತಿದೆ. ಕರೊನಾನಿಂದಾಗಿ 2018ರಿಂದ 2021ರವರೆಗಿನ ಗ್ರಂಥ ಬಹುಮಾನ ನೀಡಿರಲಿಲ್ಲ. ಈ 4 ವರ್ಷಗಳ ಗ್ರಂಥ ಬಹುಮಾನಕ್ಕೆ ಕತಿಗಳನ್ನು ಆಹ್ವಾನಿಸಿದಾಗ 115 ಕತಿಗಳು ಬಂದಿದ್ದವು. ನಿರ್ಣಾಯಕರ ನಿರ್ಣಯಂದಂತೆ ಪ್ರತಿ ಸಾಲಿನಲ್ಲಿ 3 ಕತಿಗಳನ್ನು ಆಯ್ಕೆ ಮಾಡಿ 12 ಕತಿಗಳಿಗೆ ಬಹುಮಾನ ಘೋಷಿಸಿದೆ.
2018ನೇ ಸಾಲಿನಲ್ಲಿ ಬೆಂಗಳೂರಿನ ಉಮಾ ಮುಕುಂದ ‘ಕಡೆ ನಾಲ್ಕು ಸಾಲು’ ಕವನ ಸಂಕಲನ, ಕೊಪ್ಪದ ದೀಪಾ ಹಿರೇಗುತ್ತಿ ಅವರ ‘ಫಿನಿಕ್ಸ್.... ಸೋಲಿಸಬಹುದು ಸೋಲನ್ನೆ’ ಅಂಕಣ ಬರಹಗಳ ಸಂಗ್ರಹ ಮತ್ತು ಚೆನ್ನಮ್ಮನ ಕಿತ್ತೂರಿನ ಭುವನಾ ಹಿರೇಮಠ ಅವರ ‘ಟ್ರಯಲ್ ರೂಮಿನ ಅಪ್ಸರೆಯರು’ ಕವನ ಸಂಕಲನ ಆಯ್ಕೆಯಾಗಿವೆ.
2019ನೇ ಸಾಲಿನಲ್ಲಿ ಬೆಂಗಳೂರಿನ ಭಾರತಿ ಹೆಗಡೆ ಅವರ ‘ಮಣ್ಣಿನ ಗೆಳತಿ‘ ಕಷಿ ಮಹಿಳೆಯರ ಅನುಭವ ಕಥನ’ (ಬಿಡಿ ಲೇಖನಗಳು), ಭದ್ರಾವತಿಯ ದೀಪ್ತಿ ಭದ್ರಾವತಿ ಅವರ ‘ಗೀರು’ ಕಥಾ ಸಂಕಲನ ಮತ್ತು ಧಾರವಾಡದ ಶಾಂತಲಾ ಯೋಗೀಶ ಯಡ್ರಾವಿ ಅವರ ‘ವಿಶ್ವಜಿತ’ (ಕಠೋಪನಿಷತ್ತಿನ ಯಮರಾಜ- ನಚಿಕೇತರ ಸಂವಾದರೂಪ ಕಾದಂಬರಿ) ಬಹುಮಾನಕ್ಕೆ ಆಯ್ಕೆಯಾಗಿವೆ.
2020ನೇ ಸಾಲಿನಲ್ಲಿ ಹುಬ್ಬಳ್ಳಿಯ ರೂಪಾ ರವೀಂದ್ರ ಜೋಶಿ ಅವರ ‘ಶ್ರಂಖಲಾ’ ಕಾದಂಬರಿ, ಮಂಗಳೂರಿನ ಜಯಶ್ರೀ ಬಿ. ಕದ್ರಿ ಅವರ ‘ಬೆಳಕು ಬಳ್ಳಿ ಜೀವನ ಪ್ರೀತಿಯ ಬರಹಗಳು’ ಮತ್ತು ಕಾರವಾರದ ಶ್ರೀದೇವಿ ಕೆರೆಮನಿ ಅವರ ‘ಅಂಗೈಯೊಳಗಿನ ಬೆಳಕು’ ಅಂಕಣ ಬರಹ ಬಹುಮಾನಕ್ಕೆ ಆಯ್ಕೆಯಾಗಿದೆ.
2021ನೇ ಸಾಲಿನಲ್ಲಿ ಹುಬ್ಬಳ್ಳಿಯ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ’ ಕಥೆಗಳು, ಬೆಂಗಳೂರಿನ ಪೂರ್ಣಿಮಾ ಮಾಳಗಿಮನಿ ಅವರ ‘ಇಜಯಾ’ ಕಾದಂಬರಿ ಮತ್ತು ಮೈಸೂರಿನ ಡಾ. ಸುಜಾತಾ ಅಕ್ಕಿ ಅವರ ‘ಆಕಾಶದ ಕೀಲಿ’ ನಾಟಕ ಬಹುಮಾನಕ್ಕೆ ಆಯ್ಕೆಯಾಗಿದೆ. ನೀಡಿದೆ.
ಬಹುಮಾನಿತ ಲೇಖಕಿಯರಿಗೆ ಸಂಘವು ಮಾ. 4 ಮತ್ತು 5ರಂದು ಮಹಿಳಾ ಲೇಖಕಿಯರ ಸಮಾವೇಶ ಹಮ್ಮಿಕೊಂಡು ಪ್ರತಿಯೊಂದು ಕತಿಗೆ 10,000 ರೂ. ನಗದು ಬಹುಮಾನ ಮತ್ತು ಪ್ರಮಾಣ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net