ಮಾತೆಯರಿಗೆ ಹಾಲುಣಿಸಲು ಅನುಕೂಲ

0107Klb12
Published on

ಕಲಬುರಗಿ: ಪ್ರಯಾಣದ ಅವಧಿಯಲ್ಲಿ ಮಾತೆಯರು ಮಕ್ಕಳಿಗೆ ಎದೆಹಾಲುಣಿಸಲು ಆರಾಮದಾಯಕ, ಸ್ವಚ್ಛ ಹಾಗೂ ಖಾಸಗಿ ಸ್ಥಳಾವಕಾಶ ಒದಗಿಸಲು ಶಿಶು ಆಹಾರ ಕೋಣೆ ಸ್ಥಾಪಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗುಲ್ರ‍್ಗ ಸನ್​ಸಿಟಿ ಅಧ್ಯಕ್ಷ ವಿವೇಕ ಪವಾರ ತಿಳಿಸಿದರು.

ನಗರದ ಸೂಪರ್​ ಮರ‍್ಕೆಟ್​ನ ಬಸ್​ ನಿಲ್ದಾಣದಲ್ಲಿ ರೋಟರಿ ಕ್ಲಬ್​ ಗುಲ್ರ‍್ಗ ಸನ್​ಸಿಟಿ ಸಹಯೋಗ, ಕಲ್ಯಾಣ ರ‍್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಹಕಾರದಲ್ಲಿ ನೂತನ ಶಿಶು ಆಹಾರ ಕೋಣೆ ಉದ್ಘಾಟನೆಯಲ್ಲಿ ಮಾತನಾಡಿದರು. ೧೦*೧೦ ಅಡಿ ಕೋಣೆಯಲ್ಲಿ ಮೂವರು ಏಕಕಾಲಕ್ಕೆ ಕುಳಿತು ಹಾಲುಣಿಸುವ ಸೌಲಭ್ಯ, ವಿದ್ಯುತ್​ ದೀಪ, ್ಯಾನ್​ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್​, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ ಪಾಟೀಲ್​ ನೂತನ ಕೋಣೆ ಉದ್ಘಾಟಿಸಿದರು. ಕೆಕೆಆರ್​ಟಿಸಿ ವ್ಯವಸ್ಥಾಪಕ ನರ‍್ದೇಶಕ ಎಂ.ರಾಚಪ್ಪ, ಸಂಚಾರಿ ವ್ಯವಸ್ಥಾಪಕ ಸಂತೋಷಕುಮಾರ ವಿ.ಎಚ್​, ವಿಭಾಗೀಯ ನಿಯಂತ್ರಕ ಚಂದ್ರ ಕೆ., ಡಾ.ರಾಹುಲ್​ ಮಂದಕನಳ್ಳಿ, ಡಾ.ರಾಗಿನಿ ಮಂದಕನಳ್ಳಿ, ಡಾ.ಕವಿರಾಜ ಮೋತಕಪಳ್ಳಿ, ಶಶಾಂಕ ಬಲದವಾ, ಸಿಎ ಮಲ್ಲಿಕರ‍್ಜುನ ಮಹಾಂತಗೊಳ, ಪ್ರತಿಕ ಸುತ್ರಾವೆ, ಜಗದೀಶ ಮಾಲು, ರಾಜೇಶ ಪವಾರ, ಮುಕೇಶ ಮಾಲು, ಅಮರೇಶ ಪಾಟೀಲ್​, ಅಭಿಜೀತ ಚಿಂದೆ, ಚಂದ್ರಶೇಖರ ಸುತ್ರಾವೆ, ವಿನಯ ಜವಳಕರ್​, ಮಲ್ಲಿಕರ‍್ಜುನ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net