ಮಾತೃಭಾಷೆಯಿಂದ ಕಲಿಕಾ ಅಭಿವೃದ್ಧಿ

aurad kasapa
Published on

ಔರಾದ್: ಮಾತೃ ಭಾಷೆಯಿಂದ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಅಭಿವೃದ್ಧಿ ಸಾಧ್ಯ ಎಂದು ಎಂದು ಜವಾಹರ್ ನವೋದಯ ಶಾಲೆ ವಿದ್ಯಾರ್ಥಿನಿ ಪವಿತ್ರಾ ಬುಕ್ಕಾ ಅಭಿಪ್ರಾಯಪಟ್ಟರು.

ಬುಧವಾರ ಪಟ್ಟಣದಲ್ಲಿ ತಾಲೂಕು ಕಸಾಪದಿಂದ ಜರುಗಿದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ಕವಿಗೋಷ್ಠಿಯಲ್ಲಿ ಮಾತನಾಡಿ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಲ್ಲಿ ಪ್ರತಿ ವಿಷಯದ ಕಲಿಕಾ ಸಾಮಥ್ರ್ಯ ದ್ವಿಗುಣಗೊಳ್ಳುತ್ತದೆ. ಪ್ರತಿಯೊಬ್ಬರೂ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಪೂರೈಸುವಂತೆ ಪ್ರೋತ್ಸಾಹಿಸಬೇಕು ಎಂದರು.

ಕನ್ನಡಪರ ಹೋರಾಟಗಾರ ಬಸವರಾಜ ಶೆಟಕಾರ ಮಾತನಾಡಿ, ಗಡಿಯಲ್ಲಿ ಕನ್ನಡವನ್ನು ತಳಮಟ್ಟದಿಂದ ಕಟ್ಟುತ್ತಿರುವ ಕಸಾಪ ಉತ್ತಮ ಕೆಲಸ ಮಾಡುತ್ತಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ತಾಲೂಕು ಕೇಂದ್ರದಲ್ಲಿ ಸಾಂಸ್ಕೃತಿಕ ಭವನದ ಅಗತ್ಯತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ತವರು ಕ್ಷೇತ್ರದ ಈ ಕೊರತೆ ನೀಗಿಸಬೇಕು ಎಂದರು.

ಈ ವೇಳೆ ಕಸಾಪ ವತಿಯಿಂದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳು ಪಡೆದ ಹಾಗೂ ವೈದ್ಯಕೀಯ, ಇಂಜಿನಿಯರ್ನಲ್ಲಿ ಸಾಧಕ ತಾಲೂಕಿನ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು. ಪರಿಷತ್ ತಾಲೂಕಾಧ್ಯಕ್ಷ ಜಗನ್ನಾಥ ಮೂಲಗೆ, ಶಾಲಿವಾನ ಸಿದಬಟ್ಟೆ, ಮಲ್ಲಿಕಾರ್ಜುನ ಟಂಕಸಾಲೆ, ರಾಮರೆಡ್ಡಿ, ಡಾ.ಶಾಲಿವಾನ ಉದಗಿರೆ, ವಿಶಾಲ ಮಹಾಜನ, ಬಾಲಾಜಿ ಕುಂಬಾರ, ಸೂರ್ಯಕಾಂತ ಕಳಸೆ, ವಿಜಯಲಕ್ಷ್ಮೀ ಮೂಲಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net