

ಚಾಮರಾಜನಗರ: ಮಾತೃಭಾಷೆ ತಾಯಿ ಹಾಲಿನಷ್ಟೆ ಪವಿತ್ರ ಮತ್ತು ಪರಿಶುದ್ಧವಾದದ್ದು. ಯುವಜನರು ಮಾತೃಭಾಷೆಯನ್ನು ತಾಯಿಯಂತೆ ಪ್ರೀತಿಸಿ ಗೌರವಿಸಬೇಕು ಎಂದು ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಗೌಡರವರು ತಿಳಿಸಿದರು.
ನಗರದ ಜೈಹಿಂದ್ ಕಟ್ಟೆಯಲ್ಲಿ ಜಾನ್ಸಿ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯುವಕರು ಮಾತೃಭಾಷೆಯ ಅಭಿಮಾನಿಗಳಾಗಬೇಕು. ಕನ್ನಡ ನಾಡು ,ನುಡಿ, ಭಾಷೆ, ಸಂಸ್ಕೃತಿ ಉಳಿವಿಗಾಗಿ ಚಾಮರಾಜನಗರದ ಸಂಘ ಸಂಸ್ಥೆಗಳು ಅಪಾರವಾಗಿ ದುಡಿಯುತ್ತಿವೆ ಎಂದರು.
ಝಾನ್ಸಿ ಯೂತ್ ಕ್ಲಬ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 30 ದಿನಗಳ ಸಂಸ್ಕೃತಿ, ಪರಂಪರೆ ,ಇತಿಹಾಸ ಮತ್ತು ಕನ್ನಡಿಗರ ಸ್ಮರಣೀಯರು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ ಋಗ್ವೇದಿ ಮಾತನಾಡಿ, ಚಾಮರಾಜನಗರ ಕೇರಳ ಮತ್ತು ತಮಿಳುನಾಡಿನೊಂದಿಗ ಗಡಿ ಹಂಚಿಕೊಂಡಿದ್ದರೂ ತನ್ನದೇ ಆದ ಕನ್ನಡ ಸಂಸ್ಕೃತಿ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು. ಝಾನ್ಸಿ ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ ಋಗ್ವೇದಿ ಇತರರಿದ್ದರು.