ಮಾತೃಭಾಷೆ ಕಲಿಕೆಯಿಂದಲೇ ಮಕ್ಕಳ ವಿಷಯ ಗ್ರಹಿಕೆ ಸಾಧ್ಯ

KASAPA
Published on

ಬೀದರ್: ಮಾತೃಭಾಷೆ ಕಲಿಕೆಯಿಂದ ಮಾತ್ರ ಮಕ್ಕಳಿಗೆ ವಿಷಯ ಗ್ರಹಿಕೆ ಸಾಧ್ಯವಾಗಲಿದೆ ಎಂದು ಸಾಹಿತಿ ಸುನಿತಾ ದಾಡಗೆ ಪ್ರತಿಪಾದಿಸಿದರು.

ಜಿಲ್ಲಾ ಮತ್ತು ತಾಲೂಕು ಕಸಾಪದಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತು ಸಂವಾದದಲ್ಲಿ ಮಾತನಾಡಿದ ಅವರು, ಪ್ರಸ್ತುತ ಎಲ್ಲೆಡೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಮಾತೃಭಾಷೆಯನ್ನು ದೂರ ಮಾಡುತ್ತಿರುವುದು ಸರಿಯಲ್ಲ. ಕನ್ನಡದಿಂದ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಸಾಹಿತಿಗಳ ಮನೆಗೆ ಪರಿಷತ್ ತೆರಳಿ ಅವರ ಬದುಕಿನ ಸಂವೇದನೆಗಳನ್ನು ಸುತ್ತಲಿನ ಸಮಾಜ, ಜನಮಾನಸಕ್ಕೆ ತಲುಪಿಸುವ ಉದ್ದೇಶವಿದೆ. ಕನ್ನಡ ಅಸ್ಮಿತೆ ಉಳಿಸಲು ಇಂಥ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ಸಾಹಿತಿಗಳ ಬದುಕು ಹಾಗೂ ಬರಹ ಅವಲೋಕನ ಮಾಡುವ ಈ ವಿನೂತನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಉದ್ಘಾಟಿಸಿದರು. ಸಾಹಿತಿಗಳಾದ ಸುಭಾಷ ನೇಳಗೆ, ಡಾ.ರಘುಶಂಖ ಭಾತಂಬ್ರಾ, ಸಂಗೀತಾ ಖರಾಬೆ, ಪ್ರಮುಖರಾದ ಡಾ.ಶ್ರೀಧರ ಗೌಡರ, ಮಹೇಶ ಬಿರಾದಾರ, ವೀರಶೆಟ್ಟಿ ಚನ್ನಶೆಟ್ಟಿ, ಸಿದ್ಧಾರೂಢ ಭಾಲ್ಕೆ ಇತರರಿದ್ದರು. ಡಾ.ಬಸವರಾಜ ಬಲ್ಲೂರ್ ಸ್ವಾಗತಿಸಿದರು. ಕಲ್ಯಾಣರಾವ ಚಳಕಾಪುರೆ ನಿರೂಪಣೆ ಮಾಡಿದರು. ಟಿ.ಎಂ. ಮಚ್ಚೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net