ಮಾತೃಭಾಷೆ ಕನ್ನಡದಿಂದಲೇ ಸಾಧನೆ ಸಾಧ್ಯ

1905klb17
Published on

ಕಲಬುರಗಿ: ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ಪಡೆದು, ಸಾಧನೆ ಮಾಡಬಹುದು. ಕನ್ನಡದಲ್ಲಿ ಕಲಿತು ಹಲವರು ಐಎಎಸ್​, ಐಪಿಎಸ್​ ಸೇರಿ ಉನ್ನತ ಹುದ್ದೆ ಅಲಂಕರಿಸಿರುವುದು ನಮ್ಮ ಮುಂದೆ ಇದೆ ಎಂದು ಪಿಡಿಎ ಇಂಜಿನಿಯರಿಂಗ್​ ಕಾಲೇಜಿನ ಉಪನ್ಯಾಸಕ ಬಾಬುರಾವ ಶೇರಿಕಾರ್​ ಹೇಳಿದರು.

ನಗರದ ಕೆವಿಪಿ ಪದವಿ ಪರ‍್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಉತ್ತರ ವಲಯದಿಂದ ಸೋಮವಾರ ಹಮ್ಮಿಕೊಂಡ ೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯರ‍್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕಲ್ಯಾಣಕುಮಾರ ಶೀಲವಂತ ಮಾತನಾಡಿ, ವಿದ್ಯೆ ಸಾಧಕನ ಸ್ವತ್ತಾಗಿದ್ದು, ಬಡತನದಲ್ಲೇ ಜನಿಸಿ, ಸಾಧನೆ ಮಾಡಿದ ಹಲವು ಉದಾಹರಣೆ ಇವೆ. ಸಾಧಿಸುವ ಛಲ ಇರಬೇಕು ಎಂದರು.

ಉತ್ತರ ವಲಯ ಕಸಾಪ ಅಧ್ಯಕ್ಷ ಪ್ರಭುಲಿಂಗ ಮೂಲಗೆ ಮಾತನಾಡಿ, ಗುರಿ ತಲುಪಲು ಹೆಚ್ಚು ಶ್ರಮಿಸಿ, ಪರಿಷತ್​ ವಿದ್ಯರ‍್ಥಿಗಳ ಪರಿಶ್ರಮಕ್ಕೆ ಪೂರಕವಾಗಿದೆ. ಸಮಾಜದಲ್ಲಿ ವಿದ್ಯರ‍್ಥಿಗಳನ್ನು ಶೈಕ್ಷಣಿಕವಾಗಿ, ಪ್ರೇರೇಪಿಸುವುದು ಎಲ್ಲ ರ‍್ತವ್ಯ ಎಂದರು.

ಶರಣಬಸಪ್ಪ ನರೋಣಿ, ಚಂದ್ರಕಾಂತ ಬಿರಾದಾರ ಮಾತನಾಡಿದರು. ಕೆ.ಬಸವರಾಜ ನಿರೂಪಣೆ ಮಾಡಿದರು. ಸಂಜೀವಕುಮಾರ ಪಾಟೀಲ್​ ಸ್ವಾಗತಿಸಿದರು. ಎಸ್ಸೆಸ್ಸೆಲ್ಸಿ ಕನ್ನಡ ಭಾಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತರ‍್ಣರಾದ ೪೦ ವಿದ್ಯರ‍್ಥಿಗಳನ್ನು ಸತ್ಕರಿಸಲಾಯಿತು.

ಕಸಾಪ ಗೌರವ ಅಧ್ಯಕ್ಷ ಶಿವಯೋಗೆಪ್ಪ ಬಿರಾದಾರ, ಗೌರವ ಕರ‍್ಯರ‍್ಶಿ ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಕೋಶಾಧ್ಯಕ್ಷ ಶ್ರೀಕಾಂತ ಪಾಟೀಲ್​ ದಿಕ್ಸಂಗಾ, ಸಂಘಟನಾ ಕರ‍್ಯರ‍್ಶಿ ಶಿವಲಿಂಗಪ್ಪ ಟೆಂಗಳಿ, ಸಂಚಾಲಕ ನವಾಬ್​ಖಾನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net