

ನೆಲಮಂಗಲ: ಕನ್ನಡಿಗರು ಮಾತೃಭಾಷೆ ಕಡೆಗಣಿಸುವುದು ಸರಿಯಲ್ಲ ಎಂದು ವನಕ್ಲಲು ಮಲ್ಲೇಶ್ವರ ಸಂಸ್ಥಾನದ ಶ್ರೀಬಸವರಮಾನಂದ ಸ್ವಾಮೀಜಿ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆೆ ಹಾಗೂ ಕರ್ನಾಟಕ ಜನಸೈನ್ಯ ಕಲ್ಚರಲ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ನೆಲಮಂಗಲ ಕನ್ನಡ ಹಬ್ಬ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನ್ಯಭಾಷಿಗರೂ ಕನ್ನಡ ಕಲಿಯಬೇಕಿದೆ. ಪ್ರತಿಯೊಬ್ಬರು ಮಾತೃ ಭಾಷೆಯನ್ನು ಹೆಚ್ಚಾಗಿ ಬಳಸಿದಾಗ ಮಾತ್ರ ಭಾಷೆ ಉಳಿಯಲು ಸಾಧ್ಯ. ಕೇವಲ ನವೆಂಬರ್ನಲ್ಲಿ ಮಾತ್ರ ರಾಜ್ಯೋತ್ಸವ ಆಚರಿಸದೆ ನಿತ್ಯ ಉತ್ಸವವಾಗಿ ಆಚರಿಸಬಹುದು ಎಂಬುದನ್ನು ಸಂಘಟನೆ ಮಾಡಿ ತೋರಿಸಿದೆ ಎಂದರು.
ಶ್ರೀ ಕೆಂಪಮ್ಮ ದೇವಿ ಶಕ್ತಿ ಪೀಠದ ಶಕ್ತಿ ಬಾಲ ಅಮ್ಮ ಮಾತನಾಡಿ, ಕರ್ನಾಟಕ ಉತ್ತಮ ಸಂಸ್ಕೃತಿ, ಸಾಹಿತ್ಯ ತುಂಬಿರುವ ನಾಡಾಗಿದ್ದು ಇಲ್ಲಿ ಜನಿಸಿರುವ ಪ್ರತಿಯೊಬ್ಬರು ಪುಣ್ಯವಂತರು. ಪಾಶ್ಚಿಮಾತ್ಯ ಭಾಷೆ, ಸಂಸ್ಕೃತಿಯ ಅನುಕರಣೆಯ ಭರದಲ್ಲಿ ಕನ್ನಡ ಭಾಷೆಯನ್ನು ದೂರಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಬಸವನಹಳ್ಳಿ ಶಿವಾನಂದ ಆಶ್ರಮದ ರಮಣಾನಂದ ಸ್ವಾಮೀಜಿ, ಲಗ್ಗೆರೆ ಶ್ರೀ ಶಿರಡಿ ಸಾಯಿಬಾಬ ದೇವಾಲಯದ ಪೀಠಾಧ್ಯಕ್ಷ ರಾಮಪ್ರಸಾದ್ಗುರೂಜಿ, ಮಾಗಡಿ ರುದ್ರಮುನೇಶ್ವರ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಸಂಘಟನೆ ಗ್ರಾಮಾಂತರ ಜಿಲ್ಲಾಧ್ಯಕ್ಷ ವಾಜರಹಳ್ಳಿ ನವೀನ್, ತುಮಕೂರು ಜಿಲ್ಲಾಧ್ಯಕ್ಷ ಜಗದೀಶ್, ಕೆ.ಶ್ರೀನಿವಾಸ್ವುೂರ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ಯುವ ಘಟಕ ಅಧ್ಯಕ್ಷ ನವೀನ್ಕುಮಾರ್, ದಾಸರಹಳ್ಳಿ ಕಾರ್ವಿುಕ ಘಟಕ ಅಧ್ಯಕ್ಷ ಸುರೇಶ್, ಕುಣಿಗಲ್ ಘಟಕ ಅಧ್ಯಕ್ಷ ನವೀನ್, ದೊಡ್ಡಬಳ್ಳಾಪುರ ಯುವ ಘಟಕ ಅಧ್ಯಕ್ಷ ಎಂ.ನವೀನ್ಕುಮಾರ್, ತಾಲೂಕು ಅಧ್ಯಕ್ಷ ಯೂನಸ್ಪಾಷಾ, ಯುವ ಘಟಕ ಅಧ್ಯಕ್ಷ ಮುಬಾರಕ್ಪಾಷಾ, ಸಂಘಟನೆಯ ಮಹೇಶ್, ಜ್ಞಾನೇಶ್, ಶ್ರೀಧರ್, ನಾರಾಯಣ್ಸ್ವಾಮಿ, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಧ್ವಜರೋಹಣ, ಮೆರವಣಿಗೆ: ನಗರದ ಬಸವೇಶ್ವರ ವೃತ್ತದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಡಾ.ಶಿವಕುಮಾರಸ್ವಾಮೀಜಿ ಮುಖ್ಯರಸ್ತೆಯಲ್ಲಿ ಆಶಾಕಾರ್ಯಕರ್ತೆಯರು ಕನ್ನಡ ಧ್ವಜರೋಹಣ ಮಾಡಿದರು. ನಗರದ ಸಂತೆ ಬೀದಿಯಿಂದ ಅಂಬೇಡ್ಕರ್ ಭವನದ ವರೆಗೆ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿದರು.
ಪ್ರಶಸ್ತಿ ಪ್ರಧಾನ: ವಿವಿಧ ಕ್ಷೇತ್ರದ ಸುಮಾರು 16 ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರೆ, 150ಕ್ಕೂ ಹೆಚ್ಚು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿ ಮಹಿಳಾ ಪೌರಕಾರ್ವಿುಕರಿಗೆ ಸಂಘಟನೆ ಅಧ್ಯಕ್ಷ ಬಿ.ನರಸಿಂಹಯ್ಯ ಬಾಗಿನ ನೀಡಿದರು.