ಮಾಣಿಕನಗರ ಗ್ರಾಪಂಗೆ ಪಂಚಶೀಲ ಅಧ್ಯಕ್ಷೆ

29HBD1
Published on

ಹುಮನಾಬಾದ್: ಮಾಣಿಕನಗರ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಪಂಚಶೀಲ ಹೆಗ್ಗಣೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮಾಣಿಕ ನಿಮಾನೆ ಚುನಾಯಿತರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪಂಚಶೀಲ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮಾಣಿಕ ನಿಮಾನೆ, ಶೀಲಾಬಾಯಿ ಜೆ. ನಾಮಪತ್ರ ಸಲ್ಲಿಸಿದ್ದು, ಮಾಣಿಕ ಹೆಚ್ಚು ಮತ ಪಡೆದು ಗೆಲುವಿನ ಸಾಧಿಸಿದರು ಎಂದು ಚುನಾವಣಾಧಿಕಾರಿ ನಿಂಗರಾಜ ಅರಸ್ ಘೋಷಿಸಿದರು. 24 ಸದಸ್ಯ ಬಲದ ಗ್ರಾಪಂನಲ್ಲಿ ಒಬ್ಬ ಸದಸ್ಯ ಗೈರಾಗಿದ್ದರು. ಪಿಡಿಒ ಹಣಮಂತರಾವ ಕಡಕೋಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net