ಮಾಣಿಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗೆ ಕಂಚು

PH 03
Published on

ಕಲಬುರಗಿ: ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಹುಮನಾಬಾದ್‌ನ ಮಾಣಿಕ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಯನ್ ಪಿ. ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.

ಮಂಡ್ಯದ ಪೀಪಲ್ಸ್ ಎಜ್ಯುಕೇಶನ್ ಟ್ರಸ್ಟನ್ ಈಜು ಕೊಳದಲ್ಲಿ ಕರ್ನಾಟಕ ಸ್ವಿಮಿಂಗ್ ಅಸೋಶಿಯೇಷನ್‌ನಿಂದ ಸೋಮವಾರ 6 ವಿಭಾಗಗಳಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ ಆಯೋಜಿಸಲಾಗಿತ್ತು. ಮಾಣಿಕ ಪಬ್ಲಿಕ್ ಶಾಲೆಯಿಂದ ಒಟ್ಟು 11 ಮಕ್ಕಳು ವಿವಿಧ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

ನಯನ್ 14 ವರ್ಷದೊಳಗಿನ ವಿದ್ಯಾರ್ಥಿಗಳ 50 ಮೀಟರ್ ಫ್ರೀ ಸ್ಟೆÊಲ್ ರಿಲೇಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾನೆ. ಈತ ಮೂಲತಃ ಕಲಬುರಗಿಯವನಾಗಿದ್ದು, ತಂದೆ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಾರೆ. ಮೊದಲು 3 ವರ್ಷ ಕಲಬುರಗಿಯ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾನೆ. ಇದೀಗ ಕಳೆದ 2 ವರ್ಷಗಳಿಂದ ಮಾಣಿಕ ನಗರ ಶಾಲೆಗೆ ಬಂದಿದ್ದು, ಒಂದು ವರ್ಷ ಶಂಕರ ಕವಲಗಿ ಅವರಲ್ಲಿ ತರಬೇತಿ ಪಡೆದಿದ್ದಾನೆ. ಮಾಣಿಕ ನಗರ ಪಬ್ಲಿಕ್ ಶಾಲೆಗೆ ಈಜು ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಬಂದAತಾಗಿದೆ.

ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಆನಂದರಾಜ್ ಮಾಣಿಕಪ್ರಭು, ಕಾರ್ಯದರ್ಶಿ ಚಾರುದತ್ತ ಪ್ರಭು, ಪ್ರಾಂಶುಪಾಲೆ ಸುಮಂಗಲಾ ಆರ್.ಜಹಾಗಿರದಾರ್, ಅಕಾಡೆಮಿಕ್ ಇನ್‌ಚಾರ್ಜ್ ಅರುಂಧತಿ ಭಾಗವತ, ಕೋಚ್ ಶಂಕರ ಕವಲಗಿ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net