ಮಾಡುವ ಕೆಲಸದಲ್ಲಿರಲಿ ಶ್ರದ್ಧೆ

27BK5
ಬಸವಕಲ್ಯಾಣ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಅಂಕುರ ಉತ್ಸವವನ್ನು ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಉದ್ಘಾಟಿಸಿದರು. ಮಲ್ಲಿಕಾರ್ಜುನ ಚಿರಡೆ, ವೀರಣ್ಣ ಹಲಶೆಟ್ಟೆ, ಮಲ್ಲಯ್ಯ ಸ್ವಾಮಿ, ವಿಜಯಲಕ್ಷ್ಮೀ ಗಡ್ಡೆ, ಡಾ.ಭೀಮಾಶಂಕರ ಬಿರಾದಾರ, ಮಾಯಾ ಮುರಾಳೆ, ಡಾ.ಶಾಂತಲಾ ಪಾಟೀಲ ಇತರರಿದ್ದರು.
Published on

ಬಸವಕಲ್ಯಾಣ: ಶ್ರದ್ಧೆ ಮತ್ತು ಬದ್ಧತೆಯೊಂದಿಗೆ ಮಾಡುವ ಕೆಲಸಗಳೇ ಮನುಷ್ಯನ ವ್ಯಕ್ತಿತ್ವ ರೂಪಿಸುತ್ತವೆ ಎಂದು ಬಿಡಿಪಿಸಿ ನಿರ್ದೇಶಕಿ ವಿಜಯಲಕ್ಷ್ಮೀ ಗಡ್ಡೆ ಹೇಳಿದರು.

ಶ್ರೀ ಬಸವೇಶ್ವರ ಪದವಿ ಕಾಲೇಜಿನಿಂದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಅಂಕುರ ಉತ್ಸವ-೨೦೨೫ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಂತರ ಅಧ್ಯಯನ ಹಾಗೂ ಕಠಿಣ ಪರಿಶ್ರಮ ವ್ಯಕ್ತಿಯಲ್ಲಿನ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗುತ್ತದೆ ಎಂದರು.

ಬಿಡಿಪಿಸಿ ನಿರ್ದೇಶಕ ಮಲ್ಲಯ್ಯ ಸ್ವಾಮಿ ಹಿರೇಮಠ ಮಾತನಾಡಿ, ಅಧ್ಯಾಪಕ ವೃತ್ತಿ ಅತ್ಯಂತ ಪವಿತ್ರ. ಭಾಷೆಗಳ ಜ್ಞಾನ ವಿದ್ಯಾರ್ಥಿಗಳಿಗೆ ತಲುಪಿಸುವ ದೀಪವಾಗಿ ಶಿಕ್ಷಕ ಕೆಲಸ ಮಾಡುತ್ತಾನೆ. ಬಸವಾದಿ ಶರಣರ ಚಿಂತನೆಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ವಿಜ್ಞಾನ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ವೈಚಾರಿಕ ಅರಿವು ಮತ್ತು ವೈಜ್ಞಾನಿಕ ತಿಳುವಳಿಕೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಅರಿವು ಮೂಡಿಸುತ್ತವೆ. ಪ್ರತಿಯೊಬ್ಬರಲ್ಲಿ ಹುದುಗಿದ ಸಂವೇದನೆ ಹಾಗೂ ಸಾಂಸ್ಕೃತಿಕ ಪ್ರಜ್ಞೆ ಕಲೆಯಾಗಿ ರೂಪುಗೊಳ್ಳುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅಂಕುರ ಉತ್ಸವ ವೇದಿಕೆ ಒದಗಿಸಿದೆ ಎಂದು ತಿಳಿಸಿದರು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ನಿರ್ದೇಶಕ ವೀರಣ್ಣ ಹಲಶೆಟ್ಟೆ, ಅಕ್ಕಮಹಾದೇವಿ ಕಾಲೇಜು ಪ್ರಾಚಾರ್ಯೆ ಮಾಯಾ ಮುರಾಳೆ, ಶ್ರೀ ಬಸವೇಶ್ವರ ಸ್ನಾತಕೋತ್ತರ ಕಾಲೇಜು ಪ್ರಾಚಾರ್ಯ ಡಾ.ಶಾಂತಲಾ ಪಾಟೀಲ, ಪವನ ಪಾಟೀಲ, ಶ್ರೀನಿವಾಸ ಉಮಾಪುರೆ, ಡಾ.ಬಸವರಾಜ ಖಂಡಾಳೆ, ಅಶೋಕ ರೆಡ್ಡಿ, ಸಚಿನ್ ಬಿಡವೆ, ಗಂಗಾಧರ ಸಾಲಿಮಠ, ರೋಷನ್ ಬಿ., ಎಂಡಿ ಜಬಿ, ಶ್ರುತಿ ನೀಲಮಠ, ಜಗದೇವಿ ಜವಳಗೆ, ಸಂಗೀತಾ ಮಹಾಗಾವೆ ಉಪಸ್ಥಿತರಿದ್ದರು. ಪಾರ್ವತಿ ಸ್ವಾಗತಿಸಿದರು. ಸ್ನೇಹಾ ರಾಜಪೂತ ವಂದಿಸಿದರು. ಹಾಜ್ರಾ ಹಾಗೂ ಪೃಥ್ವಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net