ಮಾಡುವ ಕಾರ್ಯದಲ್ಲಿ ಸೇವಾ ಮನೋಭಾವವಿರಲಿ

12SPT4
Published on

ಸೋಮವಾರಪೇಟೆ: ಯಾವುದೇ ಸೇವಾ ಕಾರ್ಯವನ್ನು ಸೇವಾ ಮನೋಭಾವದಿಂದ ಮಾಡಬೇಕು ಇನ್ನರ್ ವ್ಹೀಲ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲರಾದ ಕವಿತಾ ನಿಯಾತ್ ಸಲಹೆ ನೀಡಿದರು.


ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‌ಗೆ ಶನಿವಾರ ಭೇಟಿ ನೀಡಿದ ಅವರು, ಒಕ್ಕಲಿಗರ ಸಂಘದ ಶ್ರೀಗಂಧ ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆ ವತಿಯಿಂದ ಮಾಡುತ್ತಿರುವ ಹಲವು ಸೇವೆಗಳು ಅದು ತಲುಪಬೇಕಾದ ವ್ಯಕ್ತಿಗಳಿಗೆ ತಲುಪುತ್ತಿದೆ. ನಾವು ಸೇವೆಗಳನ್ನು ಸೇವಾ ಮನೋಭಾವದಿಂದ ಮಾಡಿದರೆ ಅದು ಸಾರ್ಥಕವಾಗುತ್ತದೆ. ಮುಂದಿನ ದಿನಗಳಲ್ಲಿಯೂ ಹೆಚ್ಚು ಸೇವೆಗಳನ್ನು ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಪ್ರೇಮಾ ಹೃಷಿಕೇಶ್ ವಹಿಸಿದ್ದರು. ಕಾರ್ಯದರ್ಶಿ ಅಮ್ರಿತಾ ಕಿರಣ್, ಖಜಾಂಚಿ ಶಿಲ್ಪಾ ಪ್ರಸಾದ್, ಪದಾಧಿಕಾರಿಗಳಾದ ರಾಜೇಶ್ವರಿ ಸುರೇಶ್, ತನ್ಮಯಿ ಪ್ರವೀಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net