ಮಾಜಿ ಸೈನಿಕರಿಗೆ ಗೌರವ

Ex Serviceman Sanman At Siddaramaih ITI
Published on

ಬೀದರ್: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಎಲೀಟ್ ಅಕಾಡೆಮಿ ಹಾಗೂ ಸಿದ್ದರಾಮಯ್ಯ ಐಟಿಐ ವತಿಯಿಂದ ಇಲ್ಲಿಯ ರಾಮನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಗೌರವಿಸಲಾಯಿತು.
ನಿವೃತ್ತ ಸುಬೇದಾರ್ ವಿಠ್ಠಲರಾವ್, ಮಂಜುನಾಥ ರೆಡ್ಡಿ, ಸೂರ್ಯಕಾಂತ ಗುಪ್ತಾ ಹಾಗೂ ಪ್ರಮೀಳಾ ಅವರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ ಅವರು, ಮಾಜಿ ಸೈನಿಕರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಅಕಾಡೆಮಿ ಅಧ್ಯಕ್ಷ ನಾಗನಾಥ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಅಕ್ಕಮಹಾದೇವಿ, ಸುಷ್ಮಾ, ಪೂಜಾ, ನೀಲಾಂಬಿಕಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net