ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ

10GKK1-Web
ಗೋಕಾಕ ತಾಲೂಕು ಅಖಿಲ ಬ್ರಾಹ್ಮಣ ಸಮುದಾಯದವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪ್ರತಿಭಟಿಸಿದರು. ಬಿ.ಕೆ. ಜೋಶಿ, ಹನುಮಂತ ದೇಶಪಾಂಡೆ, ಲೀಲಾ ಜೋಶಿ, ಪರಿಮಳ ಜೋಶಿ ಇತರರಿದ್ದರು.
Published on

ಗೋಕಾಕ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಲ್ಹಾದ ಜೋಶಿ ಹಾಗೂ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು, ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಶುಕ್ರವಾರ ಗೋಕಾಕ ತಾಲೂಕು ಅಖಿಲ ಬ್ರಾಹ್ಮಣ ಸಮುದಾಯದಿಂದ ಬೃಹತ್ ಪ್ರತಿಭಟನೆ ಕೈಗೊಂಡರು. ನಗರದ ಬಸವೇಶ್ವರ ವೃತ್ತದಲ್ಲಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕುಮಾರಸ್ವಾಮಿ ಅವರು ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ್ದಾರೆ. ನಿಂದನೆ ಬಿಟ್ಟು ಗೌರವಯುತವಾದ ರಾಜಕಾರಣ ಮಾಡಬೇಕು ಎಂದು ಆಗ್ರಹಿಸಿದರು. ಬಿ.ಕೆ. ಜೋಶಿ, ಹನುಮಂತ ದೇಶಪಾಂಡೆ, ಶ್ರೀಧರ ಮುತಾಲಿಕದೇಸಾಯಿ, ಅನಿಲ ಸುಣಧೋಳಿ, ಪ್ರಸನ್ನ ಕುಲಕರ್ಣಿ, ಅವಿನಾಶ ಕುಲಕರ್ಣಿ, ವಿಶ್ವಾಸ ಸುಣಧೋಳಿ, ಕವಿತಾ ಬಾಡಗಂಡಿ, ಮಂಜುಳಾ ಕುಲಕರ್ಣಿ, ಲೀಲಾ ಜೋಶಿ, ಪರಿಮಳ ಜೋಶಿ, ಸುಜಾತಾ ದೇಶಪಾಂಡೆ, ರಾಹುಲ ದೇಶಪಾಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net