ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ; ಅಧಿವೇಶನದಲ್ಲಿ ನೌಕರರ ಬೇಡಿಕೆ ಪ್ರಸ್ತಾಪ

3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಲವಾರು ವರ್ಷಗಳಿಂದ ಹು-ಧಾ ಮಹಾನಗರ ಪಾಲಿಕೆಯಲ್ಲಿ ನೀರು ಸರಬರಾಜು ನೌಕರರನ್ನು ಎಲ್ ಆ್ಯಂಡ್ ಟಿ ಕಂಪನಿಗೆ ಹಸ್ತಾಂತರಿಸಲಾಗಿದೆ. ಅವರನ್ನು ಮರುನಿಯುಕ್ತಿ ಮಾಡುವುದು ಹಾಗೂ ಬಾಕಿ ವೇತನ ಬಿಡುಗಡೆ ವಿಷಯವನ್ನು ಫೆ. ೧೬ರಂದು ವಿಧಾನಸಭೆ ಅಽವೇಶನದಲ್ಲಿ ಪ್ರಸ್ತಾಪಿಸಿ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ೧೬ ದಿನಗಳಿಂದ ಪಾಲಿಕೆ ಆವರಣದಲ್ಲಿ ಸರದಿ ಉಪವಾಸ ನಡೆಸುತ್ತಿರುವ ಹಂಗಾಮಿ ನೌಕರರನ್ನು ಮಂಗಳವಾರ ಭೇಟಿ ಮಾಡಿದ ನಂತರ ಅವರು ಮಾತನಾಡಿದ ಅವರು, ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುತ್ತೇನೆ. ಮುಂಬರುವ ಚುನಾವಣೆಯ ನಂತರ ಸರ್ಕಾರ ರಚನೆಯಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದೆ. ಆಗ ಈ ನೌಕರರ ಸಮಸ್ಯೆಯನ್ನು ಸಂಪೂರ್ಣ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.
ಹಂಗಾಮಿ ನೌಕರರ ಪರ ಹೋರಾಟದ ನೇತೃತ್ವ ವಹಿಸಿರುವ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹಾಗೂ ನೌಕರರು, ಕುಟುಂಬ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net