

ಹುಮನಾಬಾದ್: ತಾಲೂಕಿನ ಕಲ್ಲೂರ ರಸ್ತೆಯ ಬಸವತೀರ್ಥ ಮಠದ ವಸತಿ ಶಾಲೆಯ ಮಕ್ಕಳು ಬುಧವಾರ ಬೆಳಗ್ಗೆ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡ ಸುದ್ದಿ ತಿಳಿದ ತಕ್ಷಣ ಮಾಜಿ ಸಚಿವ ರಾಜಶೇಖರ ಪಾಟೀಲ್ ಬುಧವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಮಕ್ಕಳ ಆರೋಗ್ಯದ ಬಗ್ಗೆ ವೈದ್ಯರಿಗೆ ವಿಚಾರಿಸಿ ಮಾಹಿತಿ ಪಡೆದು, ಮಕ್ಕಳಿಗೆ ಮತ್ತು ಪಾಲಕರಿಗೆ ಯಾವುದೇ ರೀತಿಯಿಂದ ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬಿ ನಂತರ ಹಣ್ಣು ಹಂಪಲು,ಆಹಾರದ ಕಿಟ್ ವಿತರಿಸಿದರು.
ಸಂಬಂಧಪಟ್ಟ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಕ್ಕಳ ಆರೋಗ್ಯದ ಕುರಿತು ವಿಶೇಷವಾಗಿ ವೈದ್ಯರ ಜತೆ ಚರ್ಚಿಸಿ, ಇದರ ಬಗ್ಗೆ ತನಿಖೆ ನಡೆಸಬೇಕು. ತಪ್ಪು ಕಂಡು ಬಂದಲ್ಲಿ ಯಾರೆ ಇರಲಿ ಕ್ರಮ ವಹಿಸಬೇಕೆಂದು ಸೂಚಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಫ್ಸರಮಿಯಾ, ಪುರಸಭೆ ಉಪಾಧ್ಯಕ್ಷ ಮುಕ್ರಾಂ ಜಾ, ಮುಖ್ಯ ವೈದ್ಯಾಧಿಕಾರಿ ನಾಗನಾಥ ಹುಲಸೂರೆ , ಡಿಡಿಪಿಐ ಸಲೀಂ ಪಾಶಾ, ಕ್ಷೇತ್ರ ಶಿಕ್ಷಣಾಧೀಕಾರಿ ವೆಂಕಟೇಶ ಗೂಡಾಳ, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ, ಡಿವೈಎಸ್‌ಪಿ ಜೆ.ಎಸ್.ನ್ಯಾಮೇಗೌಡ, ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ ಸಿದ್ದೇಶ್ವರ, ತಾಪಂ ಕಾರ್ಯನಿರ್ವಹಕ ಅಧಿಕಾರಿ ದೀಪಿಕಾ ನಾಯ್ಕರ, ಪ್ರಮುಖರಾದ ಮೈನೋದ್ದೀನ್ ಮೋಮಿನ್, ವಿಜಯಕುಮಾರ ನಾತೆ, ಪದ್ರೀಪ ಪಸರ್ಗಿ, ದತ್ತಕುಮಾರ ಚಿದ್ರಿ, ಸಚಿನ ದಾಡಗೆ, ಸುಧಾಕರ ಸಂಗಮ, ಇತರರಿದ್ದರು.