ಮಾಜಿ ಸಚಿವ ಶ್ರೀರಾಮುಲು ಅಚ್ಚರಿ ಹೇಳಿಕೆ

IMG20230902121602 copy
Published on

ಯಾದಗಿರಿ: ರಾಜ್ಯದಲ್ಲಿ ಮುಂದಿನ ಐದು ವರ್ಷ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನಡೆಸಲಿ ಎಂದು ದೇವರಲ್ಲಿ ಪ್ರಾಥರ್ಿಸುವುದಾಗಿ ಮಾಜಿ ಸಚಿವ ಬಿ.ಶ್ರೀರಾಮುಲು ಅಚ್ಚರಿ ಹೇಳಿಕೆ ನೀಡಿದರು.

ಶನಿವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಡನೆ ಮಾತನಾಡಿ, ಜನತೆ ಕಾಂಗ್ರೆಸ್ಗೆ ಚುನಾವಣೆಯಲ್ಲಿ 135 ಸ್ಥಾನ ನೀಡುವ ಮೂಲಕ ಬಹುಮತದ ಸರಕಾರ ರಚಿಸಿ ಕೊಟ್ಟಿದ್ದಾರೆ. ನಾವು ಸರಕಾರವನ್ನು ಕೆಡುವ ಕೆಲಸ ಮಾಡುವುದಿಲ್ಲ. ಆದರೆ, ಈ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶೇ.50ರಷ್ಟು ಲಂಚ ಹೆಚ್ಚಾಗಿದೆ. ವಿಧಾನಸೌಧದ ಕೆಳ ಮಹಡಿಯಿಂದ ಮೂರನೇ ಮಹಡಿವರೆಗಿನ ಗೋಡೆಗಳಿಗೆ ಕಿವಿ ಹಚ್ಚಿ ಕೇಳಿದರೆ ಹಣಹಣ ಎಂದು ಕೇಳಿಸುತ್ತದೆ ಎಂದು ಲೇವಡಿ ಮಾಡಿದರು.

40-45 ಜನ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದಶರ್ಿ ಬಿಎಲ್ ಸಂತೋಷ 40ರಿಂದ 45 ಜನ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಲ್ಲ. ಇದು ಕಪೋಕಲ್ಪಿತ ಎಂದ ರಾಮುಲು ಮುಂದಿನ ದಿನಗಳಲ್ಲಿ ಈ ಸರಕಾರದ ಯೋಗ್ಯತೆ ಜನತೆಗೆ ಗೊತ್ತಾಗಲಿದೆ ಎಂದರು.

ಪಕ್ಷದ ನಾಯಕರ ವಿರುದ್ಧ ಎಂಪಿ ರೇಣುಕಾಚಾರ್ಯ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿರುವುದು ನಮ್ಮ ಹಿರಿಯ ನಾಯಕರು ಗಮನಿಸುತ್ತಿದ್ದಾರೆ. ರೇಣುಕಾಚಾರ್ಯ ಬಗ್ಗೆ ನಾನು ಬಹಿರಂಗವಾಗಿ ಮಾತಾಡಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net