

ರಾಯಬಾಗ: ಮಾಜಿ ಸಚಿವ ದಿ.ವಿ.ಎಲ್.ಪಾಟೀಲ (ಅಭಾಜಿ) ಅವರು ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ ಎಂದು ಆರ್‌ಎಸ್‌ಎಸ್ ಉತ್ತರ ಪ್ರಾಂತ ಸಹ ಸಂಚಾಲಕ ಅರವಿಂದರಾವ ದೇಶಪಾಂಡೆ ಹೇಳಿದರು.
ಪಟ್ಟಣದ ಆರ್‌ವಿಆರ್ ಶಾಲೆಯಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮತ್ತು ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ 75ನೇ ಅಮೃತ ಮಹೋತ್ಸವ ಅಂಗವಾಗಿ ಕೆಎಲ್‌ಇ ವಿಶ್ವವಿದ್ಯಾಲಯ, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಡಾ.ಪ್ರಭಾಕರ ಕೋರೆ ಆಸ್ಪತ್ರೆ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಎಸ್‌ಪಿಎಂ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಪ್ರಭಾಕರ ಕೋರೆ ಅವರು ವಿವಿಧೆಡೆ ಕೆಎಲ್‌ಇ ಆಸ್ಪತ್ರೆ ಸ್ಥಾಪಿಸಿ ಎಲ್ಲ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡಿದ್ದಾರೆ. ಅದೇ ರೀತಿ ಅಭಾಜಿ ಅವರು ಜ್ಞಾನ ದಾಸೋಹ ನೀಡಿದ್ದಾರೆ ಎಂದರು. ಬೆಳಗಾವಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ಮಾತನಾಡಿ, ತಜ್ಞ ವೈದ್ಯರು, ಎಲ್ಲ ರೀತಿ ಕಾಯಿಲೆ ತಪಾಸಣೆ ಮಾಡಿದ್ದಾರೆ. ಜತೆಗೆ ರೋಗಿಗಳಿಗೆ ಉಚಿತ ಔಷಧ ನೀಡಲಾಗಿದೆ. ಶಸಚಿಕಿತ್ಸೆ ಅವಶ್ಯಕತೆ ಇರುವ ರೋಗಿಗಳಿಗೆ ಕೆಎಲ್‌ಇ ಆಸ್ಪತ್ರೆಯಲ್ಲಿ ಉಚಿತವಾಗಿ ಶಸಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು. ಚಿಕ್ಕೋಡಿ ಸಹಾಯಕ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಗಡೆದ ಮಾತನಾಡಿ, ಸರ್ಕಾರದ ಯೋಜನೆಯಡಿ ಆರೋಗ್ಯ ಕಾರ್ಡ್ ಪಡೆದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಪರಮಾನಂದವಾಡಿ ಬ್ರಹ್ಮಾನಂದ ಆಶ್ರಮದ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಡಾ.ಆನಂದ ಹೊಸೂರ, ಭಾಗ್ಯಶ್ರೀ ಪಾಟೀಲ, ಡಾ.ರಮೇಶ ಕೌಜಲಗಿ, ಡಾ.ಸೋಮಶೇಖರ ಪಾಟೀಲ, ಜಿತೇಂದ್ರ ಜಾಧವ, ಡಾ.ಎಸ್.ಎಸ್.ಬಾನೆ, ನಂದು ದೇಶಪಾಂಡೆ, ಬಸವನಗೌಡ ಆಸಂಗಿ, ಸಿಪಿಐ ಬಸವರಾಜ ಬಿಸನಕೊಪ್ಪ, ವಿ.ಎಸ್.ಚಂದರಗಿ, ರಾಜು ಶಿರಗಾಂವೆ, ಅಶೋಕ ಖನದಾಳೆ, ಮಾರುತಿ ಗೋಕಾಕ ಇದ್ದರು. ಎಸ್.ಎಸ್.ಶಿಂಗಾಡಿ ಸ್ವಾಗತಿಸಿದರು. ಶಿಕ್ಷಕ ಸಿದ್ದು ಚೌಗಲಾ ನಿರೂಪಿಸಿದರು. ಸ್ವಾತಿ ಶಿಂಗಾಡಿ ವಂದಿಸಿದರು.