ಮಾಜಿ ಸಂಸದ ಕತ್ತಿ ವಿರುದ್ಧ ಕ್ರಮಕೈಗೊಳ್ಳಲಿ

Untitled design(5)
ಕಂಪ್ಲಿ ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ, ನಗರ ಘಟಕ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಎನ್.ರಾಮಾಂಜನೇಯಲು, ತಿಮ್ಮಲಾಪುರ ದೇವಣ್ಣ, ಲೋಕೇಶ್, ದೇವೇಶ್, ಮುದಿಯಪ್ಪ, ವಾಲ್ಮೀಕಿ ಈರಣ್ಣ ಇತರರಿದ್ದರು.
Published on

ಕಂಪ್ಲಿ: ಅನುಸೂಚಿತ ಬುಡಕಟ್ಟು ಸಮುದಾಯದ ವಿರುದ್ಧ ಜಾತಿನಿಂದನೆ ಮಾಡಿದ ಮಾಜಿ ಸಂಸದ ರಮೇಶ ವಿಶ್ವನಾಥ ಕತ್ತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಹಾಗೂ ನಗರ ಘಟಕ ಪದಾಧಿಕಾರಿಗಳು ಪಟ್ಟಣದ ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಗುರುವಾರ ಮನವಿ ಸಲ್ಲಿಸಿದರು.

ಮಹಾಸಭಾದ ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ್ ಮಾತನಾಡಿ, ಮಾಜಿ ಸಂಸದ ರಮೇಶ ವಿಶ್ವನಾಥ ಕತ್ತಿ ಅವರು ನಾಯಕ ಸಮುದಾಯದ ವಿರುದ್ಧ ಕೀಳು ಪದ ಬಳಸಿ ನಿಂದನೆ ಮಾಡಿದ್ದಾರೆ. ಇದರಿಂದ ಸಾಮಾಜಿಕ ವೈಷಮ್ಯ ಮೂಡಿಸುವುದಲ್ಲದೆ, ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ. ಕತ್ತಿ ವಿರುದ್ಧ ಪ್ರಕರಣ ದಾಖಲಿಸಬೇಕು. ನಿಷ್ಪಕ್ಷವಾಗಿ ತನಿಖೆ ನಡೆಸಿ, ಶಿಕ್ಷೆ ವಿಧಿಸಬೇಕು ಒತ್ತಾಯಿಸಿದರು.

ಮಹಾಸಭಾದ ತಾಲೂಕು ಉಪಾಧ್ಯಕ್ಷ ಡಿ.ವೀರಣ್ಣ, ಪದಾಧಿಕಾರಿಗಳಾದ ಎನ್.ರಾಮಾಂಜನೇಯಲು, ತಿಮ್ಮಲಾಪುರ ದೇವಣ್ಣ, ಲೋಕೇಶ್, ದೇವೇಶ್, ಮುದಿಯಪ್ಪ, ವಾಲ್ಮೀಕಿ ಈರಣ್ಣ, ಬಿ.ಶೇಖರ್, ಬೆಳಗೋಡ್ ನಾಗರಾಜ, ನೆಲ್ಲೂಡಿ ಮಹಾಂತೇಶ್, ರಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net