

ಬೀದರ್: ವಿಧಾನ ಪರಿಷತ್ ಮಾಜಿ ಸದಸ್ಯೆ ರತ್ನಾ ಕುಶನೂರ (85) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನ ಹೊಂದಿದರು. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶನಿವಾರ ಬೆಳಗ್ಗೆ 11.30 ತಾಲೂಕಿನ ಬಕ್ಚೌಡಿ ಹತ್ತಿರದ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮಹಿಳಾ ಅರ್ಬನ್ ಕೋ-ಅಪರೇಟಿವ್ ಅಧ್ಯಕ್ಷೆ ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ನಾನಾ ರತ್ನಾ ಕುಶನೂರ ಅವರು 4 ದಶಕ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ ಸಕ್ರಿಯರಾಗಿದ್ದ ಕುಶನೂರ ಅವರನ್ನು 2002-08 ರವರೆಗೆ ವಿಧಾನ ಪರಿಷತ್ನ ಸದಸ್ಯರಾಗಿದ್ದರು. ಜಿಪಂ ಸದಸ್ಯ (ಮನ್ನಳ್ಳಿ ಕ್ಷೇತ್ರ)ರಾಗಿ ಸಹ ಒಂದು ಅವಗೆ ಚುನಾಯಿತರಾಗಿದ್ದರು. ರಾಜಕಾರಣಿಯಾಗಿ ಮಾತ್ರವಲ್ಲದೆ, ಸಹಕಾರ ಕ್ಷೇತ್ರ, ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ರತ್ನಾ ಅವರ ಪತಿ ಮಾಜಿ ಸಚಿವ ದಿ.ವೀರಶೆಟ್ಟಿ ಕುಶನೂರ. 1978ರಲ್ಲಿ ಬೀದರ್ ಕ್ಷೇತ್ರದಿಂದ ಗೆದ್ದು ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಸಹಕಾರ ಸಚಿವರಾಗಿದ್ದರು. 1982 ರಾಜ್ಯಸಭೆ ಸದಸ್ಯರಾಗಿದ್ದರು.