ಮಾಜಿ ಶಾಸಕರು ಸೌಜನ್ಯ ಮರೆತಿದ್ದಾರೆ: ಜೆಡಿಎಸ್​ ಕಾರ್ಯಕರ್ತರ ಪ್ರತಿಭಟನೆ

1
Published on

ಮಧುಗಿರಿ: ಮಾಜಿ ಪ್ರಧಾನಿ ದೇವೇಗೌಡ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟ ಮಾಜಿ ಶಾಸಕ ಕೆ.ಎನ್​.ರಾಜಣ್ಣ ವಿರುದ್ಧ ಜೆಡಿಎಸ್​ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಡೂಂ ಲೈಟ್​ ವೃತ್ತದವರೆಗೂ ರ್ಯಾಲಿ ನಡೆಸಿ, ರಾಜಣ್ಣ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರಿಗೆ ಶೋಭೆ ತರುವುದಿಲ್ಲ. ಮುಂದಿನ ದಿನಗಳಲ್ಲಿ ೇತ್ರದ ಜನತೆ, ಕಾರ್ಯಕರ್ತರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಎಚ್​.ಡಿ.ದೇವೇಗೌಡ ಅವರು ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನೀರಾವರಿ, ಕೈಗಾರಿಕೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ರಾಜಕೀಯ ಮೀಸಲು ಸೌಲಭ್ಯ ಕಲ್ಪಿಸಿದ್ದಾರೆ. ಇಂಥ ನಾಯಕರ ಸಾವು ಬಯಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳಾದವರು ಎಲ್ಲರ ಬಗ್ಗೆಯೂ ಗೌರವ ಹೊಂದಿರಬೇಕು. ಆದರೆ ಮಾಜಿ ಶಾಸಕರು ಸೌಜನ್ಯ ಮರೆತು, ಸಂಸ್ಕಾರ ಇಲ್ಲದವರಂತೆ ವರ್ತಿಸುತ್ತಿರುವುದು ಖಂಡನಾರ್ಹ. ಇವರು ಈ ಹಿಂದೆ ಯಾವ ಪದಲ್ಲಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಹಿರಿಯ ರಾಜಕಾರಣಿ ದೊಡ್ಡಗೌಡರ ಬಗ್ಗೆ ನೀಚ ಮಾತುಗಳಾಡುತ್ತಿರುವ ರಾಜಣ್ಣ ಅವರು ರಾಜ್ಯಮಟ್ಟದಲ್ಲಿ ಮಧುಗಿರಿಯ ಮರ್ಯಾದೆ ಹಾಳು ಮಾಡುತ್ತಿದ್ದಾರೆ. ಇವರ ದುರಹಂಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.

ಜೆಡಿಎಸ್​ನ ಜಿಲ್ಲಾಧ್ಯ ಆರ್​.ಸಿ.ಅಂಜನಪ್ಪ ಮಾತನಾಡಿ, ದೇಶದ ಪಾತೀತ, ಜಾತ್ಯತಿತ ನಾಯಕ ದೇವೇಗೌಡರಿಗೆ ಪ್ರಧಾನಿ ಮೋದಿ ನೀಡುವ ಗೌರವವನ್ನು ಕಂಡು ಕೆ.ಎನ್​.ರಾಜಣ್ಣ ಬುದ್ಧಿ ಕಲಿಯಬೇಕು. ಇವರ ಹೇಳಿಕೆಗೆ ರಾಜ್ಯದ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಹಾಕುತ್ತಿದ್ದಾರೆ. ಇವರ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್​ನ ನಾಯಕರೇ ಖಂಡಿಸಿದ್ದು, ಗಾಂಧಿ ಪ್ರತಿಮೆ ಎದುರು ಒಂದು ದಿನ ಉಪವಾಸ ಮಾಡುವ ಮೂಲಕ ರಾಜಣ್ಣ ಅವರು ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದರು.

ಜೆಡಿಎಸ್​ ಜಿಲ್ಲಾ ಮಹಿಳಾ ಟಕದ ಅಧ್ಯೆ ಎಸ್​.ಆರ್​. ಲ್ಮಮ್ಮ, ಪುರಸಭೆ ಸದಸ್ಯರಾದ ಎಂ.ಎಲ್​. ಗಂಗರಾಜು, ಕೆ. ನಾರಾಯಣ್​, ಎಂ.ಎಸ್​.ಚಂದ್ರಶೇಖರ್​ ಬಾಬು, ಜೆ.ನರಸಿಂಹಮೂರ್ತಿ, ತಾಲೂಕು ಅಧ್ಯ ಬಸವರಾಜು, ಮುಖಂಡರಾದ ಬಿ.ಎಸ್​.ಶ್ರೀನಿವಾಸ್​, ಹನುಮಂತರಾಯಪ್ಪ, ನಾಸೀರ್​, ಭಾವಿಮನೆ ಕಾಂತಣ್ಣ, ಸಿಡದರಗಲ್ಲು ಶ್ರೀನಿವಾಸ್​, ಕೀರ್ತಿಶ್ರೀ, ಎಸ್​.ಮೋಹನ್​, ಕಂಬತ್ತನಹಳ್ಳಿ ರು, ಡಿ.ವಿ. ಹಳ್ಳಿ ರಾಮು, ನರಸಪ್ಪ, ಪ್ರಭು, ಶಫೀಕ್​, ಮಂಜು, ವೆಂಕಟಾಪುರ ಗೋವಿಂದರಾಜು, ದೇವರಾಜು, ಬಜ್ಜ, ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ಹನುಮಂತರಾಯಪ್ಪ ಇದ್ದರು.

ಬೆಳ್ಳಾವಿ ವಿಧಾನಸಭೆ ೇತ್ರದಿಂದ 2004ರಲ್ಲಿ ರಾಜಣ್ಣ ಅವರಿಗೆ ಸ್ಪರ್ಧಿಸಲು ದೇವೇಗೌಡ ಅವರು ಅವಕಾಶ ನೀಡಿ ಅವರ ರಾಜಕೀಯ ಮರುಜನ್ಮಕ್ಕೆ ಕಾರಣರಾಗಿದ್ದರು. ಆದರೆ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸಿದ್ದಾಗ ಅವರನ್ನು ಗೆಲ್ಲಿಸಿ ಅವರ ಋಣ ತೀರಿಸುವುದನ್ನು ಬಿಟ್ಟು, ಅವರ ಸೋಲಿಗೆ ನೇರವಾಗಿ ಕಾರಣರಾದರು. > ಎಂ.ವಿ. ವೀರಭದ್ರಯ್ಯ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net