ಮಾಜಿ ಶಾಸಕರಿಗೆ ಕೊಲೆ ಪ್ರಕರಣದ ಸಾಕ್ಷೃ ಕೇಳಿದ ಆಗುಂತಕ

CTD EX MLA G.H. TIPPADEDDI
Published on

ಚಿತ್ರದುರ್ಗ:ರೇಣುಕ ಸ್ವಾಮಿ ಹತ್ಯೆ ಖಂಡಿಸಿ ಚಿತ್ರದುರ್ಗದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಬೆದರಿಕೆ ಕರೆ ಬಂದಿದೆ. ಪ್ರತಿಭಟನೆ ಮುಗಿದ ಬಳಿಕ ತಿಪ್ಪಾರೆಡ್ಡಿ ಅವರು ತಮ್ಮ ನಿವಾಸಕ್ಕೆ ಮರಳುತ್ತಿದ್ದ ವೇಳೆ ತಮಗೆ ಬಂದ ಕರೆ ಸ್ವೀಕರಿಸುತ್ತಿದ್ದಂತೆ ಆಗುಂತಕ,ನೀವೇನಾ ತಿಪ್ಪಾರೆಡ್ಡಿ ಎಂದು ಪ್ರಶ್ನಿಸಿದ್ದಾನೆ. ಹೌದು,ಯಾರು ಮಾತನಾಡುತ್ತಿರುವುದು ಎಂದು ಕೇಳಿದರೂ ಹೆಸರು ಹೇಳದ ಆಗುಂತಕ ಪ್ರತಿಭಟನೆ ಯಾಕೆ ಮಾಡಿದ್ದೀರಿ ಎಂದು ಕೇಳಿದ್ದಾನೆ.
ಯಾಕೆಂದು ಎಲ್ಲರಿಗೂ ಗೊತ್ತಿದ್ದೀಯಲ್ಲ ಎಂದು ತಿಪ್ಪಾರೆಡ್ಡಿ ಹೇಳಿದ್ದಾರೆ. ಕೊಲೆಯನ್ನು ‘ಅವರೇ’ ಮಾಡಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಏನು ಸಾಕ್ಷೃವಿದೆ ಎಂದು ಪ್ರಶ್ನಿಸಿದ್ದಾನೆ. ಆಗ ಮಾಜಿ ಶಾಸಕರು ಆಗುಂತಕನ ಬಳಿ ಮಾತು ಯಾಕೆಂದು ಕರೆ ಸ್ಥಗಿತಗೊಳಿಸಿದ್ದಾರೆ. ಕೆಲವು ಸೆಕೆಂಡ್‌ಗಳಾಗುತ್ತಿದ್ದಂತೆ ಕರೆ ಸ್ಥಗಿತಗೊಳಿಸಿದ್ದಾಗಿ ತಿಪ್ಪಾರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net