ಮಾಜಿ ಶಾಸಕರಿಂದ ಕಾನೂನು ಉಲ್ಲಂಘನೆ

f7a4a64c-48cb-43ad-b947-9a9e5c130394
ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಕಾಂಗ್ರೆಸ್ ಮುಖಂಡ ಚಂದ್ರಶೇಖರ ರಾಠೋಡ ಮಾತನಾಡಿದರು. ನಾಗರಾಜ ಹದ್ಲಿ, ಗೋವಿಂದ ಬಳ್ಳಾರಿ, ರಜಾಕ್ ಬೇನೂರ, ಶ್ರೀಧರ ನೀಲನಾಯಕ.
Published on

ಬಾಗಲಕೋಟೆ: ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಬಿಟಿಡಿಎ ಅಧ್ಯಕ್ಷರಾಗಿ ತಾವೇ ಕಾರ್ಯಾಧ್ಯಕ್ಷರಾಗಿರುವ ಬಿವಿವಿ ಸಂಘಕ್ಕೆ ೨೦ ಎಕರೆ ವಿಸ್ತೀರ್ಣದ ಅಭಿವೃದ್ಧಿ ಪಡಿಸಿದ ಒಂದು ಸೆಕ್ಟರ್ ಪಡೆದುಕೊಂಡಿರುವುದು ಸ್ವಜನಪಕ್ಷಪಾತವಾಗುತ್ತದೆ. ಇಲ್ಲಿ ಕಾನೂನು ಉಲ್ಲಂöಸಿರುವುದು ಸ್ಪಷ್ಟವಾಗಿದ್ದು, ಸರ್ಕಾರ ಅದನ್ನು ರದ್ದು ಪಡಿಸಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಚಂದ್ರಶೇಖರ ರಾಠೋಡ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ನಿಯಮ ಉಲ್ಲಂöಸಿ ನಿವೇಶನ ಪಡೆದ ಕಾರಣ ಪ್ರಾದೇಶಿಕ ಆಯುಕ್ತರ ತನಿಖೆಯ ವರದಿ ಆಧರಿಸಿ ಸರ್ಕಾರ ನಿವೇಶನ ಹಂಚಿಕೆ ರದ್ದು ಪಡಿಸಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಆರೋಪಿಸಿದ್ದ ವಿಷಯಗಳಿಗೆ ಸಂಬಂಽಸಿದಂತೆ ಹಲವು ನಿಯಮಗಳನ್ನು ಉಲ್ಲೇಖಿಸಿದ ರಾಠೋಡ, ಬಿವಿವಿ ಸಂಘ ಕಳೆದುಕೊಂಡಿದ್ದು ಬರೀ ೨ ಎಕರೆ. ಆದರೆ, ಅವರು ಪಡೆದುಕೊಂಡಿದ್ದು ಅಂದಾಜು ೪೦೦ ಕೋಟಿ ರೂ. ಮೌಲ್ಯದ ೨೦ ಎಕರೆ ನಿವೇಶನಗಳನ್ನು. ಅದಲ್ಲದೇ ನಿವೇಶನ ಹಂಚಿಕೆಗೆ ಸರ್ಕಾರದಿಂದ ಅನುಮೋದನೆಯನ್ನು ಪಡೆದುಕೊಂಡಿಲ್ಲ ಎಂದು ದೂರಿದರು.

ನಾವು ಯಾರೂ ಸಹ ಬಿವಿವಿ ಸಂಘದ ವಿರೋಽಗಳು ಅಲ್ಲ. ಅದನ್ನು ಜಾತಿಗೆ ಜೋಡಿಸಬಾರದು. ವೈಯಕ್ತಿಕವಾಗಿ ತಪ್ಪು ಮಾಡಿದ್ದಕ್ಕೆ ಹೀಗಾಗಿದೆ. ಅಷ್ಟಕ್ಕೂ ಬಿವಿವಿ ಸಂಘಕ್ಕೆ ಹಿಂದೆ ಎಸ್.ನಿಜಲಿಂಗಪ್ಪ ಅವರು ೨೫೩ ಎಕರೆ ಜಮೀನು ಲೀಜ್ ಕೊಟ್ಟಿದ್ದರು. ಅದು ಕಾಂಗ್ರೆಸ್ ಸರ್ಕಾರ ಎನ್ನುವುದನ್ನು ಮರೆಯಬಾರದು ಎಂದರು.
ಇನ್ನು ನಿವೇಶನ ಹಂಚಿಕೆ ವಿಚಾರವಾಗಿ ಮಾಜಿ ಶಾಸಕ ಚರಂತಿಮಠ ಅವರು ಬಿಟಿಡಿಎಯಿಂದ ಈ ವರೆಗೂ ಹಂಚಿಕೆ ಆಗಿರುವ ನಿವೇಶನಗಳ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಈಗಾಗಲೇ ಅದಕ್ಕೆ ಶಾಸಕ ಎಚ್.ವೈ.ಮೇಟಿ ಅವರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ ಎಂದು ತಿಳಿಸಿದರು.

ಬಿವಿವಿ ಸಂಘಕ್ಕೆ ಮಾತ್ರವಲ್ಲದೇ ಬಿಟಿಡಿಎಗೆ ಚರಂತಿಮಠ ಅವರು ಅಧ್ಯಕ್ಷರಾಗಿದ್ದಾಗ ಬಾಗಲಕೋಟೆ ಸಂತ್ರಸ್ತರಲ್ಲದ ಮುಧೋಳದ ಸಮಾಜ ಪರಿವರ್ತನ ಸಂಘಕ್ಕೆ ಐದು ಎಕರೆ ಜಮೀನು ಹಂಚಿಕೆ ಮಾಡಿರುವುದು ಸಹ ಕಾನೂನುಬಾಹಿರವಾಗಿದೆ. ಇದರ ಹಿಂದೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರ ಪ್ರಭಾವಕ್ಕೆ ಒಳಗಾಗಿ ಹಂಚಿಕೆ ಮಾಡಿರಬಹುದು ಎಂದರು. ಆಗಿದ್ದರೆ ಅದನ್ನು ಏಕೆ ರದ್ದು ಮಾಡಿಲ್ಲ ಎನ್ನುವ ಪ್ರಶ್ನೆಗೆ ಅದು ಸರ್ಕಾರದಿಂದ ಅನುಮೋದನೆ ಆಗಿದೆ ಎಂದು ಜಾರಿಕೊಂಡರು.

ಇನ್ನು ಬಿವಿವಿ ಸಂಘಕ್ಕೆ ಹಂಚಿಕೆ ಮಾಡಿದ್ದ ನಿವೇಶನದ ತನಿಖೆ ವೇಳೆ ಪ್ರಾದೇಶಿಕ ಆಯುಕ್ತರು ಬಿವಿವಿ ಸಂಘಕ್ಕೆ ನೋಟಿಸ್ ಕೊಟ್ಟಿಲ್ಲ, ವರ ಅಹವಾಲು ಆಲಿಸಲಿಲ್ಲವೇಕೆ ಎನ್ನುವ ಪ್ರಶ್ನೆಗೆ ಅದು ತಮಗೆ ಗೊತ್ತಿಲ್ಲ. ಪ್ರಾದೇಶಿಕ ಆಯುಕ್ತರ ಆದೇಶದ ಬಗ್ಗೆ ಅಸಮಧಾನ ಇದ್ದರೆ ನ್ಯಾಯಾಲಯಕ್ಕೆ ಹೋಗಲಿ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಮಾಜಿ ಶಾಸಕ ಚರಂತಿಮಠ ಅವರು ವಿನಾಕಾರಣ ಶಾಸಕ ಎಚ್.ವೈ.ಮೇಟಿ ಅವರ ಹೆಸರು ಎಳೆದು ತರುತ್ತಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಜಾತಿ ಮುಂದೆ ತರಬಾರದು. ಇದನ್ನು ಮುಂದುವರೆಸಿದರೆ ಚರಂತಿಮಠ ಅವರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತದೆ ಎಂದರು.

ಹಿಂದೆ ಕಾಂಗ್ರೆಸ್ ಅವಽಯಲ್ಲಿ ಬಂದಿದ್ದ ೧೩೪ ಕೋಟಿ ರೂ. ಅನುದಾನದಲ್ಲಿ ಎಲ್ಲೆಲ್ಲಿ ಕೆಲಸ ಆಗಿವೆ? ಬಿವಿವಿ ಸಂಘದ ಕಟ್ಟಡ ಗೋಡೆ, ಚರಂತಿಮಠ ಅವರು ಸಂಚರಿಸುವ ರಸ್ತೆಗಳ ಅಭಿವೃದ್ಧಿ ಬಿಟ್ಟರೆ ಬೇರೆ ಏನು ಮಾಡಿಲ್ಲ. ಕಾರ್ಪಸ್ -Àಂಡ್ ೩೮೪ ಕೋಟಿ ರೂ. ಹೋಗಿದ್ದು ಇದೇ ಚರಂತಿಮಠ ಅವರು ಬಿಟಿಡಿಎ ಅಧ್ಯಕ್ಷರಾಗಿದ್ದಾಗ. ಇದೀಗ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಶಾಸಕ ಎಚ್.ವೈ.ಮೇಟಿ ಅವರ ಅಳಿಯ ಆರೋಗ್ಯ ಇಲಾಖೆಯಲ್ಲಿ ಕಾನೂನುಬಾಹಿರವಾಗಿ ೯೨ ಹುದ್ದೆ ನೇಮಕ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಚರಂತಿಮಠ ಅವರ ಆರೋಪಕ್ಕೆ, ಅವರ ರಕ್ಷಣೆಗೆ ಶಾಸಕ ಎಚ್.ವೈ.ಮೇಟಿ ಮುಂದಾಗಿಲ್ಲ. ಅವರು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಅಳಿಯನ ಪರವಾಗಿ ತಮ್ಮ ಶಾಸಕರು ಯಾವುದೇ ಲೆಟರ್ ಸಹ ಕೊಟ್ಟಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಗೋವಿಂದ ಬಳ್ಳಾರಿ, ರಜಾಕ್ ಬೇನೂರ, ಶ್ರೀಧರ ನೀಲನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net