ಮಾಜಿ ಶಾಸಕ ಹಾಸ್ಮಿ ಸಹೋದರರು ಜೆಡಿಎಸ್‍ಗೆ

Hashmi Brothers Join To JDS Photo
Published on

ಬೀದರ್: ಮಾಜಿ ಶಾಸಕ ಸೈಯದ್ ಜುಲ್ಫೆಕಾರ್ ಹಾಸ್ಮಿ ಅವರ ಸಹೋದರರು ಜಾತ್ಯತೀತ ಜನತಾ ದಳ ಸೇರಿದ್ದಾರೆ.

ಬೆಂಗಳೂರಿನಲ್ಲಿ ವಕೀಲ ಸೈಯದ್ ಸರಫರಾಜ್ ಹಾಸ್ಮಿ, ಸೈಯದ್ ಗಾಲಿಬ್ ಹಾಸ್ಮಿ, ಮುಖಂಡರಾದ ಖಲೀಲ್ ಮರಕಲ್, ಶೇಕ್ ಅನ್ಸಾರ್ ರಿಗಲ್, ಮಹಮ್ಮದ್ ಫಸಿ ಮುಲ್ತಾನಿ ಕಾಲೊನಿ, ಮಹಮ್ಮದ್ ಲೈಖ್, ಮಹಮ್ಮದ್ ಶಹೀದುರ್ ರೆಹಮಾನ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ವಿಧಾನಸಭೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ ಅವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

ಜಾತ್ಯತೀತ ಜನತಾ ದಳ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ. ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಲಿದ್ದೇವೆ ಎಂದು ಸೈಯದ್ ಸರಫರಾಜ್ ಹಾಸ್ಮಿ ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಬಿ ಖುರೇಶಿ, ಮುಖಂಡರಾದ ಮಾರುತಿ ಬೌದ್ಧೆ, ಸುರೇಶ ಸಿಂಧೆ, ಇಸ್ಮಾಯಿಲ್ ಕಮಠಾಣ, ಅಸದುದ್ದಿನ್, ಅಬ್ದುಲ್ ಸಮದ್ ಮನ್ನಳ್ಳಿ, ಮೀರ್ ಆಶ್ರಫ್ ಪಟೇಲ್ ಚಿಟಗುಪ್ಪ, ಸಜ್ಜಾದಾ ಸಾಹೇಬ್, ಶಫಿ ಪಟೇಲ್ ಸಾತೋಳಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net