ಮಾಜಿ ಶಾಸಕ ವೈ.ಸಂಪಂಗಿ ಸಿಂಡಿಕೇಟ್​ಗೆ ಭರ್ಜರಿ ಜಯ : ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂದ ಚುನಾವಣೆ

3 KGF 01A
Published on

ಕೆಜಿಎಫ್: ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂದ ಬಿ ವರ್ಗದಡಿ ನಿರ್ದೇಶಕರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಶೇ.97 ಮತದಾನ ನಡೆದಿದ್ದು, ಮಾಜಿ ಶಾಸಕ ವೈ.ಸಂಪಂಗಿ ಸಿಂಡಿಕೇಟ್​ಗೆ ಭರ್ಜರಿ ಜಯ ಲಭಿಸಿದೆ.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 2 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಿತು. 615 ಷೇರುದಾರರು ಮತದಾನ ಮಾಡುವ ಹಕ್ಕು ಪಡೆದಿದ್ದು, 591 ಮತದಾರರು ಹಕ್ಕು ಚಲಾಯಿಸಿದರು.

ಮತಗಟ್ಟೆಯ ಹೊರ ಭಾಗದಲ್ಲಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು. ವೈ.ಸಂಪಂಗಿ ಸಿಂಡಿಕೇಟ್​ ಅಭ್ಯರ್ಥಿಗಳು ಹಾಗೂ ಬೆಂಬಲಿಗರು, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಜಯಪ್ರಕಾಶ್​ನಾಯ್ಡು ಸಿಂಡಿಕೇಟ್​ನ ಅಭ್ಯರ್ಥಿಗಳು, ಕಾಂಗ್ರೆಸ್​ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತದಾರರನ್ನು ಒಲೈಸಿಕೊಳ್ಳುವ ಯತ್ನದಲ್ಲಿ ನಿರತರಾಗಿದ್ದರು.

ಚುನಾವಣೆಯಲ್ಲಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಿಸಿಎಂಎ ವರ್ಗದಡಿ ಸಾಮಾನ್ಯ ೇತ್ರದಿಂದ ಆಯ್ಕೆಯಾದ ಕೃಷ್ಣಮೂರ್ತಿ, ಎಸ್​.ನಾರಾಯಣಸ್ವಾಮಿ, ಲಕ್ಷಿ$್ಮಪತಿ, ಎಂ.ಪುರುಷೋತ್ತಮ ಹಾಗೂ ಪರಿಶಿಷ್ಟ ವರ್ಗ ಪ್ರವಿಣ್​ ಕುಮಾರ್​, ಪರಿಶಿಷ್ಟ ಪಂಗಡ ವರ್ಗದಿಂದ ನರಸಿಂಹ, ಬಿಸಿಎಂಎ ವರ್ಗದಿಂದ ಮಂಜುನಾಥ್​ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಗದೀಶ್​ ಜಯಗಳಿಸಿದ ಅಭ್ಯರ್ಥಿಗಳ ಹೆಸರು ಪ್ರಕಟಿಸಿದರು. ಮಾಜಿ ಶಾಸಕ ವೈ.ಸಂಪಂಗಿ ಕುಟುಂಬ ಸಮೇತರಾಗಿ ಹಕ್ಕು ಚಲಾಯಿಸಿದರು.

ವಿಜಯೋತ್ಸವ: ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಾಜಿ ಶಾಸಕರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನಗರದ ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಂಪಂಗಿ, ಸಂಸದ ಮುನಿಸ್ವಾಮಿ, ಶಾಸಕಿ ಎಂ.ರೂಪಕಲಾ, ನಗರ ಬಿಜೆಪಿ ಅಧ್ಯಕ್ಷ ಕಮಲ್​ನಾಥನ್​, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಜಯಪ್ರಕಾಶ್​ನಾಯ್ಡು, ನವೀನ್​ರಾಮ್​ ಜತೆಗೂಡಿ ನಮ್ಮ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಎದುರಿಸಿದರೂ ಮತದಾರರು ನಮ್ಮ ಕೈ ಹಿಡಿದಿದ್ದಾರೆ. ಇದು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದರು.

ಆದರೆ ಪಕ್ಷದಲ್ಲೇ ಇದ್ದುಕೊಂಡು ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನೇ ಸೋಲಿಸುವ ಹುನ್ನಾರ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಅವರೇ ಚಿಂತಿಸಲಿ. ಹೈಕಮಾಂಡ್​ ಎಲ್ಲವನ್ನು ಗಮನಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲಿ. ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್​ ಸರಿಯಾದ ಸಂದೇಶ ನೀಡಲಿದ್ದಾರೆ ಎಂದು ತಿರುಗೆಟು ನೀಡಿದರು. ಕೋಲಾರ ಜಿಲ್ಲಾ ಸಂಸದ ಮುನಿಸ್ವಾಮಿ ಅವರ ಗೆಲುವಿಗಾಗಿ ನಮ್ಮ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಆದರೆ ಅವರು ಸಹ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲಿಸಿದ್ದು ನೋವು ಉಂಟು ಮಾಡುತ್ತಿದೆ ಮುಂದಿನ ಚುನಾವಣೆಯಲ್ಲಿ ಮತದಾರರು ಉತ್ತಮವಾದ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಉಸ್ತುವಾರಿ ಸಚಿವ ಮುನಿರತ್ನ ಅವರನ್ನು ಭೇಟಿ ಮಾಡಿದ ಮಾಜಿ ಶಾಸಕ ಸಂಪಂಗಿ ಹಾಗೂ ನಿದೇರ್ಶಕರು ಚುನಾವಣೆ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳನ್ನು ವಿವರಿಸಿದ್ದಾರೆ.

ಬಿಜೆಪಿ ಮುಖಂಡರಾದ ಕಣ್ಣರೂ ವಿಜಿಕುಮಾರ, ರಾಮಸಾಗರ ಅಶ್ವತ್ಥ್​, ನಗರಸಭೆ ಸದಸ್ಯೆ ರಾಮುಲಮ್ಮಗಂಟ್ಲಪ್ಪ, ಕೃಷ್ಣಮೂರ್ತಿ, ಎನ್​.ಜಿ.ಹುಲ್ಕೂರು ಗ್ರಾಪಂ ಅಧ್ಯಕ್ಷ ಸುನೀಲ್​ಕುಮಾರ, ಪಾರಂಡಹಳ್ಳಿ ಗ್ರಾಪಂ ಅಧ್ಯಕ್ಷ ದಶರಥ್​ರೆಡ್ಡಿ, ಮಾರಿಕುಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಜಯರಾಮರೆಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net