

ಯಾದಗಿರಿ: ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಶಾಸಕ, ಬಿಜೆಪಿ ಹಿರಿಯ ನಾಯಕ ಡಾ.ವೀರಬಸವಂತರಡ್ಡಿ ಮುದ್ನಾಳ್(೭೨) ಸೋಮವಾರ ಮಧ್ಯಾಹ್ನ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ತಾಯಿ, ಪತ್ನಿ, ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಸೇರಿ ಆರು ಸಹೋದರರು, ಅಪಾರ ಬಳಗವನ್ನು ಅಗಲಿದ್ದಾರೆ.
ಸುಮಾರು ೧೦ ವರ್ಷ ಹಿಂದೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಲೇ ಮುಂಬಯಿನ ಟಾಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಡಾ.ಮುದ್ನಾಳ್, ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಆಗಾಗ್ಗೆ ಹೋಗಿ ಬರುತ್ತಿದ್ದರು. ಆದರೆ ಇಂತಹ ರೋಗದಿಂದ ಬಳಲುತ್ತಿz್ದೆÃನೆ ಎಂದು ತೋರಿಸಿಕೊಳ್ಳದೆ ಸದಾ ಲವಲವಿಕೆಯಿಂದ ಇರುತ್ತಿದ್ದರು.
ಲೋಕಸಭೆ ಚುನಾವಣೆ ವೇಳೆ ಯಾದಗಿರಿಗೆ ಪ್ರಚಾರಕ್ಕೆ ಬಂದಿದ್ದ ಅಣ್ಣಾಮಲೈ ಅವರ ಬಹಿರಂಗ ಸಭೆಯಲ್ಲಿ ಭಾಗವಹಿಸಿz್ದÉÃ ಕೊನೆ. ಆರು ತಿಂಗಳಿAದ ದೈಹಿಕವಾಗಿ ಬಹಳಷ್ಟು ಬಳಲುತ್ತಿದ್ದ ಅವರು ತಮ್ಮದೇ ಆದ ವಿಬಿಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಲ್ಯಾಣ ಕರ್ನಾಟಕದ ಪ್ರಬಲ ರಾಜಕೀಯ ಮನೆತನಗಳಲ್ಲಿ ಒಂದಾದ ಮುದ್ನಾಳ್ ಪರಿವಾರದ ಪ್ರಸಿದ್ಧ ವೈದ್ಯ ಹಾಗೂ ರಾಜಕಾರಣಿಯಾಗಿದ್ದ ಡಾ.ವೀರಬಸವಂತರಡ್ಡಿ ಬೆಳಗಾವಿ ಮಿಲಿಟರಿ ಶಾಲೆಯಲ್ಲಿ ಆರಂಭಿಕ ಅಭ್ಯಾಸ ಮಾಡಿದ್ದರು. ನಂತರ ಕಲಬುರಗಿ ಎಂಆರ್‌ಎAಸಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಎಸ್ (ಜನರಲ್ ಮೆಡಿಸಿನ್) ಪದವಿ ಮುಗಿಸಿದ ಅವರಿಗೆ ಮಾಜಿ ಮಂತ್ರಿ ಡಾ.ಎ.ಬಿ. ಮಾಲಕರಡ್ಡಿ ವಿದ್ಯಾಗುರು. (ರಾಜಕಾರಣದಲ್ಲಿ ಗುರು-ಶಿಷ್ಯರು ಎದುರಾಳಿ) ಎಂಎಸ್ ಮುಗಿಸಿದ ಡಾ.ರಡ್ಡಿ ಮುಂಬಯಿನ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ೧೯೮೩ರಿಂದ ೮೭ರವರೆಗೆ, ಬಳಿಕ ವಿಜಯಪುರದ ಬಿಎಲ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೂ ಶಸ್ತçಜ್ಞರಾಗಿ ೨೦೦೪ರವರೆಗೆ ಸೇವೆ ಸಲ್ಲಿಸಿದ್ದ ಅವರು, ವಿಜಯಪುರ, ಬಾಗಲಕೋಟೆ ಮತ್ತು ನೆರೆಯ ಮಹಾರಾಷ್ಟçದ ಅನೇಕ ಊರುಗಳಲ್ಲಿ ಕಾರ್ಯನಿರ್ವಹಿಸಿ `ಆಪರೇಶನ್ ಸಕ್ಸಸ್ ಡಾಕ್ಟರ್' ಎಂದೇ ಹೆಸರು ಗಳಿಸಿದ್ದರು.
ಗುರು-ಶಿಷ್ಯರ ರಾಜಕೀಯ ಕಾಳಗ: ಸುಮಾರು ೨೧ ವರ್ಷ ಸಾರ್ಥಕ ವೈದ್ಯಕೀಯ ಸೇವೆ ಸಲ್ಲಿಸಿದ್ದ ಡಾ.ವೀರಬಸವಂತರಡ್ಡಿ ಮುದ್ನಾಳ್ ೧೯೯೯ರಲ್ಲಿ ರಾಜಕಾರಣದತ್ತ ಮುಖ ಮಾಡಿದರು. ರಾಜ್ಯದಲ್ಲಿ ಜನತಾ ಪರಿವಾರ ಒಡೆದ ಮನೆಯಾಗಿತ್ತು. ಅದರಲ್ಲಿ ದಿ.ರಾಮಕೃಷ್ಣ ಹೆಗಡೆ ಅವರ ಜೆಡಿಯು ಸೇರಿ ಯಾದಗಿರಿ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದು ಸೊತರು. ಆಪ್ತರು ಹೇಳುವಂತೆ ಈ ರಾಜಕೀಯ ನನಗೆ ಬೇಡ ಎಂದು ಮರಳಿ ವಿಜಯಪುರಕ್ಕೆ ಹೋಗುವ ನಿರ್ಧಾರದ ಮಾತುಗಳನ್ನು ಆಡಿದರು. ಆಗ ಒಡನಾಡಿಗಳು ಸೋಲು-ಗೆಲುವು ಸಹಜ. ನೀವು ಶಾಸಕರಾಗಬೇಕು. ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರ ಮುಖ್ಯವಾಗಬೇಕೆಂಬ ಮಾತುಗಳಿಗೆ ಮನಸೋತು ಇಲ್ಲಿಯೇ ಉಳಿದು ವೃತ್ತಿ ಮತ್ತು ಪ್ರವೃತ್ತಿ (ವೈದ್ಯಕೀಯ ಸೇವೆ ಮತ್ತು ರಾಜಕಾರಣ) ಮಾಡುತ್ತ ಐದು ವರ್ಷ ಕಳೆದರು. ಮುಂದೆ ಜೆಡಿಎಸ್‌ನಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದರೂ ಟಿಕೆಟ್ ಸಿಗಲಿಲ್ಲ. ಆದರೆ ಎದೆಗುಂದದೆ ಅನುಯಾಯಿಗಳು ಮತ್ತು ಅಭಿಮಾನಿಗಳನ್ನು ಕಟ್ಟಿಕೊಂಡು ೨೦೦೪ರಲ್ಲಿ ಯಾದಗಿರಿ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಯುವ ಮೂಲಕ ಎದುರಾಳಿ ಮತ್ತು ವಿದ್ಯಾಗುರು ಡಾ.ಎ.ಬಿ. ಮಾಲಕರಡ್ಡಿ ಅವರನ್ನು ೧೦ ಸಾವಿರ ಮತಗಳ ಅಂತರದಿAದ ಸೋಲಿಸಿ ವಿಧಾನಸಭೆಗೆ ಎಂಟ್ರಿ ಕೊಟ್ಟರು. ಮುಂದೆ ಜೆಡಿಎಸ್ ಬೆಂಬಲಿತ ಶಾಸಕರಾಗಿ ಗುರುತಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು. ಆಗಿನ ಸಮ್ಮಿಶ್ರ ಸರ್ಕಾರಗಳು ಅವಧಿ ಪೂರ್ಣಗೊಳಿಸದ್ದರಿಂದ ೩೮ ತಿಂಗಳು ಮಾತ್ರ ಶಾಸಕರಾಗಿ ಕೆಲಸ ಮಾಡುವಂಥ ಸ್ಥಿತಿ ಎದುರಾಯಿತು.