ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಬೇಲೂರಿನಲ್ಲಿ ಭವ್ಯ ಸ್ವಾಗತ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಬೇಲೂರಿನಲ್ಲಿ ಭವ್ಯ ಸ್ವಾಗತ
Published on

ಬೇಲೂರು : ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯ ಎರಡನೆ ದಿನ ನೂರಾರು ಬೈಕ್ ಜಾಥಾದೊಂದಿಗೆ ಹಳೇಬೀಡು, ಹಗರೆ, ಮೂಲಕ ಶುಕ್ರವಾರ ಬೇಲೂರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದ ಸಂದರ್ಭ ಮಹಿಳೆಯರು ಕುಂಬ ಕಳಸಗಳನ್ನು ಹೊತ್ತು ಸ್ವಾಗತಿಸಿದರು. ಅಭಿಮಾನಿಗಳು ಬೃಹತ್ ಗಾತ್ರದ ಆಲೂಗಡ್ಡೆ ಹಾರ, ಅಲಸಿನ ಹಾರ ಹಾಗೂ ಪುಷ್ಪಹಾರಗಳನ್ನು ಹಾಕಿ ಸ್ವಾಗತಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೆರವಣಿಗೆಯಲ್ಲಿ ಚನ್ನಕೆಶವಸ್ವಾಮಿ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ ನಂತರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವೇದಿಕೆಗೆ ಆಗಮಿಸಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಪಕ್ಷದ ಮುಖಂಡರ ಸಮ್ಮುಖದಲ್ಲಿ ಉದ್ಘಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ರಾಜ್ಯದ ರೈತ ಮಕ್ಕಳನ್ನು ಮದುವೆಯಾಗುವ ಮಹಿಳೆಯರಿಗೆ ಎರಡು ಲಕ್ಷ ರೂ, ಪ್ರೋತ್ಸಾಹ ಧನ ನೀಡಲಾಗುವುದು, ಅಲ್ಲದೆ ರಾಜ್ಯದ ಬಡವರ ಕಷ್ಟ ನಿವಾರಣೆ ಮಾಡುವುದೇ ನನ್ನ ದ್ಯೇಯ, ಅದಕ್ಕೆ ಎಲ್ಲರೂ ನಮಗೆ ಶಕ್ತಿ ನೀಡಬೇಕು, ಸ್ವತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಬಡವರ ಬದುಕನ್ನು ಕಟ್ಟಿ ಕೊಡಲು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಸಾಧ್ಯವಾಗಿಲ್ಲ, ಆದ್ದರಿಂದ ಲೂಟಿ ಹೊಡೆಯುವ ಪಕ್ಷಗಳನ್ನು ದಿಕ್ಕರಿಸಿ ಪ್ರಾದೇಶಿಕ ಪಕ್ಷಕ್ಕೆ ನೀವು ಶಕ್ತಿ ನೀಡಬೇಕಿದೆ. ಅಲ್ಲದೆ ಈ ಪಕ್ಷಗಳು ಸಾಲವನ್ನು ಮಾಡಿ ಜನರ ಮೇಲೆ ಹೊರೆ ಹೋರಿಸಿದ್ದಾರೆ, ಆದ್ದರಿಂದ ಈ ಪಂಚರತ್ನ ರಥಯಾತ್ರೆ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಏಕಾಂಗಿಯಾಗಿ ಆರೋಗ್ಯ ಸಮಸ್ಯೆ ಬದಿಗಿಟ್ಟು ಸಂಚರಿಸಿ ಹೋರಾಟ ಮಾಡುತಿದ್ದೇನೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿ ಹಾಗೂ ಜನತೆಗೆ ಒಳಿತುವ ಮಾಡುವುದಕ್ಕಾಗಿ, ನಾಡಿನ ತಾಯಂದಿರ ಕಣ್ಣೀರು ಒರೆಸಲು ಮುಂದಾಗಿದ್ದೇನೆ. ರೈತರು, ಯುವಕರಲ್ಲಿ ಸಮಸ್ಯೆ ಕಾಡುತ್ತಿದೆ. ಇಂತಹ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಪಂಚರತ್ನ ರಥಯಾತ್ರೆ ಆರಂಬಿಸಿ ಮುಂದಿನ 3 ತಿಂಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ನಂತರ ಎಲ್ಲ ಸಮಸ್ಯೆಗಳನ್ನು ನಿವಾರಿಸಲಿದ್ದೇವೆ. ಅಲ್ಲದೆ ಬಡವರು ಖಾಸಗಿ ಸಾಲೆಗೆ ಮಕ್ಕಳನ್ನು ಸೇರಿಸಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಪಬ್ಲಿಕ್ ಶಾಲೆ ಹಾಗೂ ಪ್ರತಿ ಗ್ರಾಪಂಗೊಂದು 30 ಹಾಸಿಗೆಗಳ ಆಸ್ಪತ್ರೆ ತೆರೆಯಲಾಗುವುದು ಎಂದರು.

ರಾಜ್ಯದಲ್ಲಿ 75 ಲಕ್ಷ ರೈತ ಕುಟುಂಬಗಳಿವೆ. ಎಲ್ಲ ರೈತರಿಗೆ ಒಂದು ಎಕರೆಗೆ ಬಿತ್ತನೆ ಬೀಜ ರಸಗೊಬ್ಬರ ಕೊಳ್ಳಲು 10 ಸಾವಿದಂತೆ 10 ಎಕರೆವರೆಗೆ ನೀಡಲಾಗುವುದು. ಗ್ರಾಪಂಗೊಂದು ಆಲೂಗಡ್ಡೆ ಮಾರಾಟಕ್ಕೆ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗುವುದು. ರೈತರಿಗೆ ರೈತ ಚೈತನ್ಯ ಕಾರ್ಯಕ್ರಮ ಮಾಡಲಾಗುವುದು. ಮುಂದಿನ ದಿನಗಳಲ್ಲಿ ರೈತರು ಸಾಲಗಾರರಾಗಬಾರದು. ಆತ್ಮಹತ್ಯೆಗೆ ಶರಣಾಗಬಾರದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಾಲಾಮನ್ನಾಮಾಡಲಿದೆ. ಉಚಿತ ನೀರಾವರಿ ಯೋಜನೆ, ವಸತಿ ರಹಿತ ಬಡ ಕುಟುಂಬಕ್ಕೆ ಮನೆ ನಿರ್ಮಾಣ, 65 ವರ್ಷ ವಯಸ್ಕರಿಗೆ ಪ್ರತಿ ತಿಂಗಳು 5 ಸಾವಿರ ಮಾಶಾಸನ, ಮನೆಯಲ್ಲಿರುವ ಮಹಿಳೆಯರು ಮನೆಯಲ್ಲೆ ಉದ್ಯಮ ಪ್ರಾರಂಭಿಸಲು ಶೇಕಡಾ 90% ಸಬ್ಸಿಡಿ ನೀಡಲಾಗುವುದು. ವಿದವೆ, ಅಂಗವಿಕಲರಿಗೆಅವಿವಾಹಿತ ಮಹಿಳೆಯರಿಗೆ ಸಾಲಮನ್ನಾ ಮಾಡಲಾಗುವುದು ಎಂದು ತಿಳಿದರು.

ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಂಪೂರ್ಣ ಸಾಲಮನ್ನಾ, 2.50 ಲಕ್ಷ ಕೋಟಿ ರೂ, ಅಂದಾಜು ಮೊತ್ತ ಮಾಡಿದ್ದೇವೆ. ಆದರೆ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು 5.65 ಲಕ್ಷ ಕೋಟಿ ರೂ, ಸಾಲ ಮಾಡಿ ರಾಜ್ಯದ ಜನತೆ ಮೇಲೆ ಹೊರೆ ಹೊರಿಸಿದ್ದಾರೆ ಎಂದು ಆರೋಪಿಸಿದ ಅವರು ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಬೇಲೂರು ತಾಲೂಕಿನ ಇತಿಹಾಸದಲ್ಲಿ ಇದು ಐತಿಹಾಸಿಕ ಸಭೆಯಾಗಿದೆ. ಬೇಲೂರು ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಹೆಚ್ಚಾಗಿದೆ. ಯಗಚಿ ಡ್ಯಾಂ ಕಟ್ಟಿದ್ದು. ಹೇಮಾವತಿ ಡ್ಯಾಂ ಕಟ್ಟಿದ್ದು ಯಾರು, ಜಿಲ್ಲೆಯ ಅಭಿವೃದ್ಧಿಗೆ ದೇವೇಗೌಡರು ಹಲವು ಕೊಡುಗೆ ಕೊಟ್ಟಿದ್ದಾರೆ. ಕಡೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ ಮಾಡಲು ದೇವೇಗೌಡರು ಬರಬೇಕಾಯ್ತು. ಬಿಜೆಪಿಯವರಿಗೆ ಮಾನ ಮಾರ್ಯಾದೆ ಇಲ್ಲದೆ ನಾವು ಮಾಡಿದ ಕೆಲಸಗಳನ್ನು ಉದ್ಘಾಟನೆ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಾಡಿದ ಕೆಲಸಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಇನ್ನೂ ಆಸ್ಪತ್ರೆಯ ಕೆಲಸವೇ ಮುಗಿದಿಲ್ಲ ಆಗಲೇ ಉದ್ಘಾಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಹೆಣ್ಮಕ್ಕಳಿಗೆ ನೀಡಿರುವ ಕೊಡುಗೆ ಏನು ಅಂದ್ರೆ ಅದು ಸಿಎಲ್ 7 ಮದ್ಯದಂಗಡಿ. ಇವು ಎಲ್ಲ ಕಡೆ ನಾಯಿ ಕೊಡೆಗಳಂತೆ ಹುಟ್ಟುವಂತೆ ಮಾಡಿದ್ದಾರೆ. ಅದರಲ್ಲೂ ಹಾಸನ ಜಿಲ್ಲೆಗೆ ಹೆಚ್ಚು ಸಿಎಲ್-7 ಕೊಟ್ಟಿದ್ದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮುಗಿಸಲು ಎರಡು ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ. ಇವರೆಡು ರಾಷ್ಟ್ರೀಯ ಪಕ್ಷಗಳು ಪಸೆರ್ಂಟೇಜ್ ಪಕ್ಷಗಳು ಕಮಿಷನ್ ಪಡೆಯುವ ಪಕ್ಷಗಳು. ಆದರೆ ಯಾರಾದ್ರೂ ಕುಮಾರಣ್ಣ, ರೇವಣ್ಣ ಪಸೆರ್ಂಟೇಜ್ ತೆಗೆದುಕೊಂಡಿದ್ದಾರೆ ಅಂತ ಹೇಳಲಿ. ಅಲ್ಲದೆ ಒಬ್ಬ ಸೋಪಿನ ಫ್ಯಾಕ್ಟರಿ ಮಾಲೀಕನ ಮನೆಯಲ್ಲಿ ಎಂಟು ಕೋಟಿ ಹಣ ಸಿಗುತ್ತೆ. ಅವನಿಗೆ ಒಂದೇ ದಿನಕ್ಕೆ ಬೇಲ್ ಸಿಗುತ್ತೆ ಅಂದ್ರೆ ಹೇಗೆ ಸರ್ಕಾರ ನಡೆಯುತ್ತಿದೆ ಅಂತ ಜನರೇ ತಿಳಿಯಬೇಕಿದೆ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಬೇಲೂರು ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷ ಕಾಂಗ್ರೆಸ್ ಆಡಳಿತವಿತ್ತು. ಆದರೆ ಅವರು ಏನು ಕೆಲಸ ಮಾಡಿದ್ದರು ಎಂಬುದನ್ನು ನೋಡಿದ್ದೇವೆ. ನಾಲ್ಕವರೆ ವರ್ಷದಲ್ಲಿ ನಾವು ಏನು ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಿದೆ. ನಾವು ಹಣ ಹೆಂಡ ಹಂಚೊದಿಲ್ಲ, ಕೆಲಸ ಮಾಡಿ ಮತ ಕೇಳ್ತೇವೆ. ಕೇವಲ ಒಂದು ಬಾರಿ ಗೆಲ್ಲಿಸಿದ್ದಕ್ಕೆ ಎಲ್ಲಾ ಅಭಿವೃದ್ಧಿ ಮಾಡಿದ್ದೇವೆ. ಬೇಲೂರಿನಲ್ಲಿ ಮತ್ತೆ ಜೆಡಿಎಸ್ ಅಭ್ಯರ್ಥಿ ಲಿಂಗೇಶಣ್ಣನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿಯವರು ತಾಲೂಕಿನಲ್ಲಿ ಸೀರೆ, ಹೆಂಡ ಹಂಚುತ್ತಿದ್ದಾರೆ. ನಮ್ಮ ಯುವಕರಿಗೆ ಅವರ ತಾಯಿ, ಪತ್ನಿ, ಸಹೋದರಿಯರಿಗೆ ಸೀರೆ ಕೊಡಿಸೊ ಶಕ್ತಿ ಇದೆ ಇವರ ಸೀರೆಗೆ ಕಾಯುತ್ತಿಲ್ಲ. ಬಿಜೆಪಿಯವರು ದುಡ್ಡಿನ ಮೂಲಕ ಹೋಗುತಿದ್ದಾರೆ. ನಾವು ಕೆಲಸ ಮಾಡುವ ಮೂಲಕ ಹೋಗುತಿದ್ದೇವೆ. ಕುಮಾರಣ್ಣನ ಕೈ ಬಲಪಡಿಸಬೇಕೆಂದರೆ ಬೇಲೂರಿನಲ್ಲಿ ಲಿಂಗೇಶಣ್ಣ ಗೆಲ್ಲಬೇಕು. ಜೆಡಿಎಸ್‌ಗೆ ಮತ ಹಾಕಿದ್ರೆ ಕುಮಾರಣ್ಣ ಸಿಎಂ ಆಗ್ತಾರೆ, ಕುಮಾರಣ್ಣ ಸಿಎಂ ಆದ್ರೆ ರೈತರು ಸಿಎಂ ಆದಂತೆ. ರೈತರ ಮುಖದಲ್ಲಿ ನಗು ತರಿಸಬೇಕು ಅನ್ನೋದು ಕುಮಾರಣ್ಣನ ಉದ್ದೇಶ. ಅವರಿಗೆ ಅದಿಕಾರದ ಆಸೆ ಇಲ್ಲ, ಅವರಿಗೆ ಇರೋದು ರೈತರ ಬಗೆಗಿನ ಕಾಳಜಿ ನಮಗೆ ಹೊರಗಿನ ಅಭ್ಯರ್ಥಿ ಬೇಡಾ ಸ್ಥಳಿಯ ನಾಯಕ ರೈತನ ಮಗನ ಗೆಲ್ಲಿಸಿ ಎಂದು ಮನವಿ ಮಾಡಿದರು.

ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಮತದಾರರು ನೀಡಿದ ಗೌರವಕ್ಕೆ ನಾನು ಯಾರಿಗು ನೋವಾಗದಂತೆ ಕೆಲಸ ಮಾಡಿದ್ದೇನೆ. ರಣಘಟ್ಟ ಯೋಜನೆ ಜಾರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ಕಾರಣರಿದ್ದಾರೆ. ಕೆಲವರು ನಾವು ಮಾಡಿದ ಕೆಲಸವನ್ನು ನಾವೇ ಮಾಡಿದ್ದು ಅಂತಾರೆ. ಸಿಎಂ ಇಲ್ಲಿಗೆ ಬಂದು ನಾವೇ ಮಾಡಿದ್ದು ನಾವೇ ಮಾಡಿದ್ದು ಅಂತಾರೆ. ನಮ್ಮ ಕ್ಷೇತ್ರಕ್ಕೆ ಐದು ವರ್ಷದಲ್ಲಿ 1800 ಕೋಟಿ ಅನುದಾನ ತಂದಿದ್ದೇನೆ ಸಿಎಂ ಅವರೇ ನನ್ನನ್ನ ಪುಷ್ಪಗಿರಿಯಲ್ಲಿ ಹೊಗಳಿ ಹೋಗಿದ್ದಾರೆ, ಬೇಲೂರಿಗೆ ಬಂದಾಗ ರಾಜಕೀಯಕ್ಕಾಗಿ ಟೀಕೆ ಮಾಡಿದ್ದಾರೆ. ಕೆಲಸ ಮಾಡಿದ್ದೇನೆ ಮತ್ತೆ ಚುನಾವಣೆಗೆ ಸ್ಪರ್ದೆ ಮಾಡ್ತೇ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿೆ ಮತ್ತೊಮ್ಮೆ ನನಗೆ ಅವಕಾಶ ನೀಡಿ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ರಾಮೇಗೌಡ, ಎಸ್.ಎಲ್.ಬೋಜೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ತೋಚ ಅನಂತಸುಬ್ಬರಾಯ, ಮಾಜಿ ಜಿಪಂ ಅಧ್ಯಕ್ಷ ಚಂದ್ರೆಗೌಡ, ಇಂದಿರಾ, ಮಾಜಿ ಸದಸ್ಯೆ ಲತಾ ಮಂಜೇಶ್ವರಿ, ಹೆಚ್‌ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ.ಎ.ನಾಗರಾಜ್, ತಾಪಂ ಮಾಜಿ ಅಧ್ಯಕ್ಷ ಅಬ್ದುಲ್ ಶುಭಾನ್, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಮಹೇಶ್, ಮುಖಂಡರಾದ ಸೌಮ್ಯ, ಶ್ರೀನಿಧಿ, ಭಾರತಿ, ಬಲ್ಲೇನಹಳ್ಳಿ ರವಿ, ಮಹದೇವ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net