ಮಾಗೋಡು ಭಾಗದಲ್ಲಿ ಭಯ ಹುಟ್ಟಿಸಿದ ಚಿರತೆ

YLP chirate
Published on

ಯಲ್ಲಾಪುರ: ತಾಲೂಕಿನ ಮಾಗೋಡ ಬಳಿ ಕಾಡುಪ್ರಾಣಿಗಳ ಹಾವಳಿ ಮುಂದುವರಿದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಾಗೋಡ ಸಮೀಪದ ದೇವದಮನೆ ಬಳಿ ಮಧ್ಯಾಹ್ನದ ವೇಳೆಗೆ ಚಿರತೆ ಕಾಣಿಸಿಕೊಂಡಿದೆ. ಇದು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.

ಕಳೆದ ಎರಡು ವರ್ಷಗಳಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಮೇಯಲು ಕಾಡಿಗೆ ಹೋದ ಜಾನುವಾರುಗಳು ಚಿರತೆ ದಾಳಿಗೆ ಬಲಿಯಾದ ಘಟನೆಗಳು ನಡೆದಿವೆ. ಕೊಟ್ಟಿಗೆಗೆ ನುಗ್ಗಿ ದನಕರುಗಳನ್ನು ತಿಂದ ಘಟನೆಗಳು, ನಾಯಿಗಳನ್ನು ಹೊತ್ತೊಯ್ದ ಘಟನೆಗಳೂ ಸಾಕಷ್ಟು ನಡೆದಿವೆ. ಸಾಕುಪ್ರಾಣಿಗಳನ್ನು ಕಾಯ್ದುಕೊಳ್ಳುವುದೇ ಸವಾಲಾಗಿದೆ.

ಇದೀಗ ಹಗಲು ಹೊತ್ತಿನಲ್ಲೇ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಓಡಾಡಲೂ ಭಯಪಡುವಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನ ಹರಿಸಿ, ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸುವ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ಚಿತ್ರ- 24 ವಾಯೆಲ್ಪಿ 02-

ಯಲ್ಲಾಪುರ ತಾಲೂಕಿನ ಮಾಗೋಡ ಸಮೀಪದ ದೇವದಮನೆ ಬಳಿ ಕಾಣಿಸಿಕೊಂಡ ಚಿರತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net