ಮಾಕುಟ್ಟ ಅರಣ್ಯದೊಳಗೆ ಕಸ ವಿಲೇವಾರಿ

01 vtp1 forest
ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಸುರಿಯುತ್ತಿದ್ದ ಕೇರಳ ನೋಂದಣಿ ಸಂಖ್ಯೆಯ ಲಾರಿ ಹಾಗೂ ಆರೋಪಿಗಳು.
Published on

ವಿರಾಜಪೇಟೆ: ಕೊಡಗಿನ ಗಡಿಭಾಗವಾದ ಮಾಕುಟ್ಟ ಅರಣ್ಯದೊಳಗೆ ಕಸ ಸುರಿಯುತ್ತಿದ್ದ ಕೇರಳ ನೋಂದಣಿಯ ಲಾರಿ ಮತ್ತು ಇಬ್ಬರನ್ನು ಅರಣ್ಯಾಧಿಕಾರಿಗಳು ಮಂಗಳವಾರ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ಅರಣ್ಯದೊಳಗೆ ತ್ಯಾಜ್ಯ ವಿಲೇವಾರಿ ಆಗಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಸುಹಾನ ಅತ್ತಾವರ್, ಡೈಸಿ ದೇಚಮ್ಮ, ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net